ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ನಿವಾಸಿ ಅರಣ್ಯ ಇಲಾಖೆಯಲ್ಲಿ 36 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ವನಪಾಲಕ ಕೂಸಪ್ಪ ಗೌಡ ಕೋಲ್ಚಾರು ಆ.11 ರ ರಾತ್ರಿ ಸ್ವ ಗೃಹದಲ್ಲಿ ನಿಧನರಾದರು .















ಅವರಿಗೆ 96 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶ್ಯಾಮ ಸುಂದರ ಕೋಲ್ಚಾರು, ಸತ್ಯನಾರಾಯಣ ಕೋಲ್ಚಾರು, ಬೆಂಡೋಡಿ ಪುತ್ರಿಯರಾದ ಶ್ರೀಮತಿ ಹರ್ಷಾವತಿ ವಸಂತ ಕಾಣಿಯೂರು, ನಾವೂರು ಬಂಡಾಜೆ, ಶ್ರೀಮತಿ ಜಯಶೀಲ ಕೂಸಪ್ಪ ನಿರ್ಪಾಡಿ ಪುತ್ತೂರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










