ಸುಳ್ಯ ಕಾಂಗ್ರೆಸ್ ನಿಯೋಗದಿಂದ ಜಿಲ್ಲಾಧಿಕಾರಿಗಳ ಮತ್ತು ವಿವಿಧ ಅಧಿಕಾರಿಗಳ ಭೇಟಿ ನೀಡಲಾಯಿತು.

ಜಮೀನಿನ ದಾಖಲೆಗಳಿಗೆ ಸಂಭಂಧಿಸಿ ಸುಳ್ಯ ತಾಲೂಕಿನ ಜನಸಾಮಾನ್ಯರು ರೈತರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸರಿಪಡಿಸುವ ದೃಷ್ಟಿಯಿಂದ ಅನೇಕ ವರ್ಷಗಳಿಂದ ಕಂದಾಯ ಇಲಾಖೆ ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳಿಗೆ ಅಲೆದಾಡುವುದು ಮನವಿ ಕೊಡುವುದು ಒತ್ತಡ ಹೇರುವಂತಹಾ ಕೆಲಸಗಳು ನಡೆಯುತ್ತಿದ್ದರೂ, ಈವರೆಗೂ ಯಾವುದೇ ಪರಿಣಾಮಕಾರಿ ಕೆಲಸಗಳು ನಡೆಯದಿರುವುದರ ಬಗ್ಗೆ ಜಿಲ್ಲಾಧಿಕಾರಿ ಮತ್ತು ಡಿ.ಡಿ.ಎಲ್ ಆರ್ ರವರಿಗೆ ಮನವರಿಕೆ ಮಾಡಿ ವಿಷಯದ ಗಂಭೀರತೆಯನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿಯಾಗಿ ಗಡಿಗುರುತು ಮಾಡುವುದು ಅತೀ ಮುಖ್ಯವಾಗಿರುತ್ತದೆ. ಸಪ್ಟೆಂಬರ್ ಅಂತ್ಯದೊಂದಿಗೆ ಜಡಿ ಮಳೆ ಕಡಿಮೆಯಾದ ಕೂಡಲೇ ಅದಕ್ಕಾಗಿ ಒಂದು ತಂಡವನ್ನು ನಿಯೋಜಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿರುತ್ತಾರೆ.ಜಮೀನು ದಾಖಲೆಗಳಿಗೆ ಸಂಭಂಧಿಸಿ ಪ್ಲಾಟಿಂಗ್, ಕನ್ವರ್ಷನ್, ನೈನಿಲವೆನ್, ನೈಂಟಿಫೋರ್ ಸಿ, ನೈಂಟಿಫೋರ್ ಸಿ,ಸಿ.ಸರಿಯಾಗದೆ. ಜನರಿಗೆ ಕಟ್ಟಡ ಕಟ್ಟುವಾಗ ಪಂಚಾಯತ್ ಗಳಿಂದ ಪರ್ಮಿಷನ್ ಕೂಡಾ ಸಿಗದೆ ಮನೆ ಕಟ್ಟಿಸಲಾಗದೆ,ಮೂಲಭೂತ ಅಗತ್ಯತೆಯಾದ ವಿಧ್ಯುತ್ ಗೆ ಬೇಕಾದ ಎನ್.ಒ.ಸಿ ಪಡೆಯಲು ಸಾದ್ಯವಾಗುತ್ತಿಲ್ಲ. ರೈತರಿಗೆ ಸರಕಾರದಿಂದ ಸಿಗುವ ಯಾವದೇ ಸವಲತ್ತುಗಳನ್ನು ಪಡೆಯಲಾಗದೆ ಸಾಲವಾದರೂ ಮಾಡಿ ಮಕ್ಕಳಿಗೆ ಉನ್ನತ ವಿಧ್ಯೆ ಕೊಡಿಸೋಣವೆಂದರೆ ಅದಕ್ಕೂ ಆಗದೆ, ತೀವ್ರ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಮನವರಿಕೆ ಮಾಡಲಾಯಿತು.
















ಡಿ.ಡಿ ಎಲ್ ಆರ್ ಪ್ರಸಾದಿನಿಯವರು ತನ್ನ ವ್ಯಾಪ್ತಿಯಲ್ಲಿ ಸಾದ್ಯ ಆಗುವಂತಹಾ ಎಲ್ಲಾ ತುರ್ತು ಕೆಲಸವನ್ನು ಕೂಡಲೇ ಮಾಡಿಸಿ ಕೊಡುತ್ತೇನೆ,ಹಾಗೂ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸಂಭವಿಸಿದ ವಿಷಯಗಳಿಗೆ ಕಡಬದಲ್ಲಿ ಈಗಾಗಲೇ 13 ಸಾವಿರ ಎಕ್ರೆ ಜಂಟಿ ಸರ್ವೇ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಅದರಂತೆಯೇ ಅರಣ್ಯ ಇಲಾಖೆಗೆ ವಿಶೇಷ ಪತ್ರಬರೆದು ಅವರ ಇಲಾಖೆಯ ಸರ್ವೇಯರ್ಗಳನ್ನು ಕರೆಸಲು ವ್ಯವಸ್ತೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ ಕಾಂಗ್ರೆಸ್ ನಿಯೋಗದಲ್ಲಿ ಕೆ.ಪಿ.ಸಿ.ಸಿ.ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಕೆ.ಪಿ.ಜಾನಿ , ದಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿಗಳಾದ ಮಹಮ್ಮದ್ ಕುಂಞಿ ಗೂನಡ್ಕ ,ದ.ಕ.ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ ದ.ಕ.ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಪ್ರದಾನ ಕಾರ್ಯದರ್ಶಿ ರಾಜು ನೆಲ್ಲಿಕುಮೇರಿ , ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ವಸಂತ ಪೆಲ್ತಡ್ಕ ಇವರುಗಳು ಉಪಸ್ತಿತರಿದ್ದರು.










