
ಮೊಗೇರ ಯುವ ವೇದಿಕೆ ಆರಂತೋಡು – ಸಂಪಾಜೆ ವಲಯ, ಮೊಗೇರ ಗ್ರಾಮ ಸಮಿತಿ ತೊಡಿಕಾನ ಇದರ ವತಿಯಿಂದ ಸನ್ಮಾನ, ಅಭಿನಂದನಾ ಕಾರ್ಯಕ್ರಮ ಕಲ್ಲುಗುಂಡಿ ಪಂಚಾಯತ್ ಸಭಾಭವನದಲ್ಲಿ ಆಗಸ್ಟ್ 10 ರಂದು ನಡೆಯಿತು.

ಮೊಗೇರ ಸಮುದಾಯದ ಹಿರಿಯರಾದ ಚೌಕರು ಕಟ್ಟಕೋಡಿ, ಕೇಪು ದೊಡ್ಡ ಕುಮೇರಿ, ಚಂದ್ರಶೇಖರ ಕಡೆ ಪಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಶಿಕ್ಷಣ ಸಂಯೋಜಕರು, ಮೊಗೇರ ಸಂಘದ ಗೌರವಾಧ್ಯಕ್ಷರಾದ ಕೇಶವ ಹೊಸಗದ್ದೆ ಪ್ರಧಾನ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ , ಚಿತ್ತರಂಜನ್ ದಾಸ್ ಮೊಗೇರ ಸಂಘಟನೆ ಮತ್ತು ಜನಾಂಗದ ಹೋರಾಟ ಮತ್ತು ಆಟಿ ಉತ್ಸವದ ಬಗ್ಗೆ ಮಾತನಾಡಿದರು.















ಕಾರ್ಯಕ್ರಮದಲ್ಲಿ ಮೊಗೇರ ಸಮುದಾಯದ ನಿವೃತ್ತ ಸೈನಿಕರಾದ ಮಾಧವ ಬಿ ಬಾಜಿನಡ್ಕ ಮತ್ತು ಪುರುಷೋತ್ತಮ ಚಾoಬಾಡು ಇವರನ್ನು ಅಭಿನಂದಿಸಲಾಯಿತು. ಎಸ್ ಎಸ್ ಎಲ್ ಸಿ , ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮುದಾಯದ ಬಡ ವಿದ್ಯಾರ್ಥಿನಿಗೆ ಪುಸ್ತಕ, ಬ್ಯಾಗ್, ಆರ್ಥಿಕ ಸಹಕಾರ ನೀಡಲಾಯಿತು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಆರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಡಾ. ಲಕ್ಷ್ಮೀಶ ಕಲ್ಲುಮುಟ್ಲು, ಗಸ್ತು ಅರಣ್ಯ ರಕ್ಷಕ ಮನೋಹರ್ ಪಲ್ಲತಡ್ಕ, ಆರಂತೋಡು ಮೊಗೇರ ಗ್ರಾಮ ಸಮಿತಿಯ ಅಧ್ಯಕ್ಷರಾದ ಬಾಬು ಮಾಡದ ಕಾನ, ತಾಲೂಕು ಮುಗೇರ ಯುವ ವೇದಿಕೆಯ ಗೌರವಾಧ್ಯಕ್ಷರಾದ ಪ್ರಕಾಶ್ ಪಾತೆಟ್ಟಿ , ಆರಂತೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮನ್ಸ ಮೊಗೇರ ಅಡ್ಕಬಳೆ ಅತಿಥಿಗಳಾಗಿದ್ದರು. ಸಂಪಾಜೆ ವಲಯ ಸಮಿತಿಯ ಕೋಶಾಧಿಕಾರಿ ಚಿದಾನಂದ ಕಟ್ಟಕೋಡಿ ಸ್ವಾಗತಿಸಿದರು. ಕುಮಾರಿ ಬಿಂದ್ಯ ಕೆ.ಆರ್ ಕಡೆಪಾಲ ಪ್ರಾರ್ಥಿಸಿದರು. ದೇವಪ್ಪ ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದುಡಿಕುಣಿತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಅರಂತೋಡು ಸಂಪಾಜೆ ವಲಯ ಸಮಿತಿ ಅಧ್ಯಕ್ಷರಾದ ಮೋಹನ ಕುಮಾರ್ ಅಡ್ಕಬಳೆ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡೆಪಾಲ ಹಾಗೂ ಎಲ್ಲಾ ಪದಾಧಿಕಾರಿಗಳು, ತೊಡಿಕಾನ ಗ್ರಾಮ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.










