ಅಜ್ಜಾವರದಲ್ಲಿ ಗ್ರಂಥಾಲಯ ಪಿತಾಮಹ ರಂಗನಾಥರ ಜನ್ಮದಿನಾಚರಣೆ

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಜ್ಜಾವರ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ಗ್ರಂಥಾಲಯ ಪಿತಾಮಹ, ಗ್ರಂಥಾಲಯ ವಿಜ್ಞಾನಿ ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ ಗ್ರಾಮ ಆಡಳಿತ ಅಧಿಕಾರಿ ಶ್ರೀ ಮತಿ ಶ್ರೀಕಲಾರವರು ನೆರವೇರಿದರು. ಗ್ರಂಥಾಲಯ ದಿನಾಚರಣೆಯ ಮಹತ್ವದ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜಯಮಾಲ ಎ. ಕೆ ಯವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ದೇವಕಿ ವಿಷ್ಣುನಗರ, ಸದಸ್ಯರಾದ ಪ್ರಸಾದ್ ಕುಮಾರ್ ರೈ ಮೇನಾಲ, ಸತ್ಯವತಿ ಬಸವನಪಾದೆ, ಶ್ವೇತಾ ಕುಮಾರಿ ಶಿರಾಜೆ, ಗ್ರಂಥಾಲಯ ಮೇಲ್ವಿಚಾರಕಿ ಲಕ್ಷ್ಮೀ.ಕೆ, ರಝಾಕ್ ಅಡ್ಕ ಅನಿಲ್ ಕಾಂಟ್ರಾಕ್ಟರ್, ಪಂಚಾಯತ್ ಸಿಬ್ಬಂದಿಗಳಾದ ಕಾರ್ತಿಕ್, ಲೀಲಾವತಿ, ಹೇಮಾವತಿ, ಲೋಕೇಶ್,ಗ್ರಾಮ ಸಹಾಯಕರಾದ ಶಿವಣ್ಣ, ಪರಮೇಶ್ವರ, ಸುಂದರ, ಗಣೇಶ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಸಿಹಿ ತಿಂಡಿಯನ್ನು ನೀಡಿ ಪಂಚಾಯತ್ ಸದಸ್ಯರಾದ ಜಯರಾಮ ಅತ್ಯಡ್ಕರವರು ಸಹಕರಿಸಿದರು.ಸ್ವಾಗತ ಮತ್ತು ಧನ್ಯವಾದ ನಿರೂಪಣೆಯನ್ನು ಗ್ರಂಥಾಲಯ ಮೇಲ್ವಿಚಾರಕರಾದ ಲಕ್ಷ್ಮಿಯವರು ಮಾಡಿದರು.