ಮಿತ್ತೂರು ನಾಯರ್ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಆಟಿ ಕೂಟ ಹಾಗೂ ಮಾದಕ ವಸ್ತುಗಳ ದುಷ್ಮರಿಣಾಮಗಳ ಕುರಿತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ಕೈಪೆ ರವರ ಅಧ್ಯಕ್ಷತೆಯಲ್ಲಿ ಆ.11 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.















ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಸುಂತೋಡು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಚಿತ್ರಕುಮಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರವಿಚಂದ್ರ,
ಕ್ಲಸ್ಟರ್ ಸೂಪರ್ವೈಸರ್ ಶ್ರೀಮತಿ ರೂಪ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ನ್ಯಾಯವಾದಿ ಶ್ಯಾಮ್ ಪಾನತ್ತಿಲ ರವರು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಪೋಸ್ಟರ್ ಬಿಡುಗಡೆ ಮಾಡಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಮಹಿಳೆಯರಿಗೆ ಕ್ರೀಡಾ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಆಟಿ ಕೂಟದ ಪ್ರಯುಕ್ತ ಎಲ್ಲಾ ಸಂಘದ ಸದಸ್ಯರು ವಿವಿಧ ಬಗೆಯ ಆಟಿ ಖಾದ್ಯಗಳನ್ನು ತಯಾರಿಸಿ ತಂದು ಉಣಬಡಿಸಿದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಬಗೆಯ ಆಟಿ ಖಾಧ್ಯ ಗಳನ್ನು ಸವಿದು ಸಂಭ್ರಮಿಸಿದರು.
ಕಾರ್ಯದರ್ಶಿ ಶ್ರೀಮತಿ ವಾರಿಜ ಮಂಜಿಕಾನ ವರದಿ ವಾಚಿಸಿದರು. ಶ್ರೀಮತಿ ಶುಭಲತಾರವರು ಲೆಕ್ಕಪತ್ರ ಮಂಡಿಸಿದರು. ವಲಯ ಮೇಲ್ವಿಚಾರಕರಾದ
ಶ್ರೀಮತಿ ಜಯಲಕ್ಷ್ಮಿ ಯವರು ಪ್ರಾಸ್ತಾವಿಕವಾಗಿ ಮಾತಾಡಿದರು. ಶ್ರೀಮತಿ ಸುಶೀಲ ಮೂರ್ಜೆ ಪ್ರಾರ್ಥಿಸಿದರು. Mbk ಶ್ರೀಮತಿ ಶುಭಲತಾರವರು ಸ್ವಾಗತಿಸಿ,
ಶ್ರೀಮತಿ ಕುಸುಮಾವತಿ ವಂದಿಸಿದರು. ಶ್ರೀಮತಿ ಶಾರದ ಡಿ. ಶೆಟ್ಟಿ ಉಬರಡ್ಕ ರವರು ಕಾರ್ಯಕ್ರಮ ನಿರೂಪಿಸಿದರು.










