ಸುಳ್ಯ ಸುದ್ದಿ ಹಬ್ಬ ಪೆರಾಜೆ ಗ್ರಾಮ ಸಮಿತಿಯ ಸಭೆ

0

ಗ್ರಾಮದ ಮಾಹಿತಿ ಚಿತ್ರೀಕರಣ ಮತ್ತು ಸಮಾರಂಭ ನಡೆಸಲು ನಿರ್ಧಾರ

ಸುಳ್ಯ ಸುದ್ದಿ ಹಬ್ಬದ ಪೆರಾಜೆ ಗ್ರಾಮ ಸಮಿತಿ ಸಭೆಯು ಆ.12 ರಂದು ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ಯನ್ನು ಪೆರಾಜೆ ಸುಳ್ಯ ಹಬ್ಬ ಗ್ರಾಮ ಸಮಿತಿಯ ಅಧ್ಯಕ್ಷ ವೇದವ್ಯಾಸ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ,ಪೆರಾಜೆ ಸೊಸೈಟಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸುದ್ದಿ ವರದಿಗಾರ ಕೃಷ್ಣ ಬೆಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣ ಬೆಟ್ಟ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮಾಡುವ ಬಗ್ಗೆ ನಾಗೇಶ್ ಕುಂದಲ್ಪಾಡಿ, ನಂಜಪ್ಪ ನಿಡ್ಯಮಲೆ,ಚಂದ್ರಕಲಾ, ವೇದವ್ಯಾಸ ಭಟ್ ಸಭೆಗೆ ತಿಳಿಸಿದರು. ಸಭೆಯಲ್ಲಿ ಗ್ರಾ.ಪಂಚಾಯತ್ ಸದಸ್ಯರು, ಸೊಸೈಟಿ ನಿರ್ದೇಶಕರು, ದೇವಸ್ಥಾನದ ಸಮಿತಿ ಸದಸ್ಯರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಾರದಾಂಬ ಸಮಿತಿ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು. ಮುಂದೆ ಗ್ರಾಮದ ಮಾಹಿತಿ ಕ್ರೋಡೀಕರಣ ಶೂಟಿಂಗ್ ಮಾಡುವ ಬಗ್ಗೆ ಮತ್ತು ಸಭಾಕಾರ್ಯಕ್ರಮ ಮಾಡುವ ಬಗ್ಗೆ ಆಗಸ್ಟ್ 25 ರಂದು ಸಂಜೆ ಶ್ರೀಸಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಸಂಜೆ 4 ಗಂಟೆಗೆ ಸಭೆ ಮಾಡುವುದೆಂದು ತೀರ್ಮಾನಿಸಲಾಯಿತು. ಶಾರದಾಂಬಾ ಸಮಿತಿ ಪ್ರಧಾನ ಕಾರ್ಯದರ್ಶಿ ತಿರುಮಲೇಶ್ವರ ಬಿ. ಎಂ. ವಂದಿಸಿದರು.