ಪೆರುಮುಂಡ-ಕಲ್ಲಪ್ಪಳ್ಳಿ: ದ್ವಿತೀಯ ವರ್ಷದ “ಗದ್ದೆಲೀ ಒಂದು ದಿನ”ಕಾರ್ಯಕ್ರಮ

0

ನೆಹರೂ ಯುವ ಕೇಂದ್ರ ಕಾಸರಗೋಡು, ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ರಿ) ಪೆರುಮುಂಡ ಕಲ್ಲಪಳ್ಳಿ
ಹಾಗೂ ಆದರ್ಶ ಮಹಿಳಾ ಸಂಘ( ರಿ. )ಪೆರುಮುಂಡ-ಕಲ್ಲಪ್ಪಳ್ಳಿ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ “ಗದ್ದೆಲೀ ಒಂದು ದಿನ”
ಸಾರ್ವಜನಿಕ ಕೆಸರು ಗದ್ದೆಯ ವಿವಿಧ ಕ್ರೀಡಾ ಸ್ಪರ್ಧೆಗಳು ಆ.೧೦ ರಂದು ಪಿ.ಎಲ್ ಪರಮೇಶ್ವರ ಗೌಡ ಪೆರುಮುಂಡರವರ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಮತ್ತು ದೀಪ ಪ್ರಜ್ವಲನೆಯನ್ನು ಹಿರಿಯರು, ಪ್ರಗತಿಪರ ಕೃಷಿಕರಾದ ಪಿ.ಎ ಬಾಲಕೃಷ್ಣ ನಾಯ್ಕ ಪಾಡಿಕೊಚ್ಚಿ, ಕಲ್ಲಪ್ಪಳ್ಳಿ ನೆರವೇರಿಸಿದರು.

ಕ್ರೀಡಾಕೂಟಕ್ಕೆ ಪಂಚಾಯತ್ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ ಪರಮೇಶ್ವರ ಗೌಡ ಪಿಎಲ್ ಪೆರುಮುಂಡ ಚಾಲನೆ ನೀಡಿದರು.

ಬಳಿಕ ಊರಿನವರಿಗೆ, ಪರವೂರಿನವರಿಗೆ ವಿವಿಧ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಪಿ.ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ಘಟಕ ಸುಳ್ಯ ಇದರ ಅಧ್ಯಕ್ಷರಾದ ಶ್ರೀಕಾಂತ್ ಭಟ್ ಗೋಳ್ವಲ್ಕರ್, ಪನತ್ತಡಿ ಗ್ರಾ.ಪಂ,ನ ೬ನೇ ವಾರ್ಡ್ ಸದಸ್ಯ ರಾಧಾಕೃಷ್ಣ ಗೌಡ, ಸುದ್ದಿ ಚಾನೆಲ್ ನಿರೂಪಕಿ, ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಪಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಬಳಿಕ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ದಾಮೋದರ.ಪಿ. ಡಿ ಸ್ವಾಗತಿಸಿ, ಜಯಪ್ರಕಾಶ್ ಪೆರುಮುಂಡ ಧನ್ಯವಾದ ಗೈದರು, ರಮೇಶ್ ಪಿ. ಕೆ ಕಾರ್ಯಕ್ರಮ ನಿರೂಪಿಸಿದರು.