ಸುಳ್ಯದ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಪೆರಾಜೆ ಶಾಸ್ಥಾವು ದೇವಸ್ಥಾನಕ್ಕೆ ಟಿ ವಿ, ಕಸದ ತೊಟ್ಟಿ ಕೊಡುಗೆ

0

ಸುಳ್ಯದ ಇನ್ನರ್ ವ್ಹೀಲ್ ಕ್ಲಬ್ ಇದರ ಅಧ್ಯಕ್ಷೆ ಮತ್ತು ಸದಸ್ಯೆಯರು ಪೆರಾಜೆ ಶಾಸ್ಥಾವು ದೇವಸ್ಥಾನಕ್ಕೆ ಒಂದು ಟಿ ವಿ ಮತ್ತು ಎರಡು ಕಸದ ತೊಟ್ಟಿಯನ್ನು ಆ.೧೨ರಂದು ಕೊಡುಗೆಯಾಗಿ ನೀಡಿದ್ದಾರೆ.
ಇನ್ನರ್ ವ್ಹೀಲ್ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಶಭರಿ ಕಡಿದಾಳ್ ರವರ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಈ ವೇಳೆ ಆಡಳಿತ ಮುಕ್ತೇಸರರು ಎನ್. ಎ ಜಿತೇಂದ್ರ, ಕಾರ್ಯದರ್ಶಿ ಲೋಕನಾಥ ಅಮೆಚೂರು, ದೇವಸ್ಥಾನದ ಸಿಬ್ಬಂದಿ ಮತ್ತು ಇತರರು ಇದ್ದರು.