ಶಿವಮೊಗ್ಗದಲ್ಲಿ ನಡೆದ “ಶಿವಮೊಗ್ಗ ಓಪನ್ ಆರನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್” ನಲ್ಲಿ ಸುಳ್ಯ ತಾಲೂಕು ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಕುನಾಲ್ ಎನ್.ಎಲ್. ನೀರಬಿದಿರೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಭಾರತೀಯ ಮೊಯೆಲ್ ಶೋಟೊಕಾನ್ ಕರಾಟೆ ಡೊ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಆಗಸ್ಟ್ 9 ಮತ್ತು 10ರಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಾನಾ ವಿಭಾಗದ ಕರಾಟೆ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಾಲಕರ ಬ್ರೌನ್ ಬೆಲ್ಟ್ ನ ಕಟಾ ವಿಭಾಗದಲ್ಲಿ ಕುನಾಲ್ ಎನ್. ಎಲ್. ಪ್ರಥಮ ಸ್ಥಾನ ಪಡೆದು ‘ಗೋಲ್ಡ್ ಮೆಡಲ್’ ಪುರಸ್ಕಾರಕ್ಕೆ ಭಾಜನನಾಗಿದ್ದಾನೆ.















ಕುನಾಲ್ ಈ ಹಿಂದೆಯೂ ಹಲವಾರು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಗಳಲ್ಲಿ ಪಾಲ್ಗೊಂಡು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾನೆ.
ಕುನಾಲ್ ಮಾರುತಿ ಪಬ್ಲಿಕ್ ಸ್ಕೂಲ್ ನಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಸುಳ್ಯ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ವಾರಿಜಾ ಎ. ನೀರಬಿದಿರೆ ಹಾಗೂ ಲೋಕೇಶ್ ನೀರಬಿದಿರೆ ದಂಪತಿಯ ಪುತ್ರ. ಈತನಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ತರಬೇತಿ ನೀಡುತ್ತಿದ್ದಾರೆ.










