ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ವಲಯದ ಗಾಂಧಿನಗರ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿರುವ ಚೆನ್ನಕೇಶವ ದೇವಸ್ಥಾನದ ಬಳಿ ವಾಸವಾಗಿರುವ ಸಂಘದ ಸದಸ್ಯೆ ಕಮಲಾಕ್ಷಿ ಎಂಬವರಿಗೆ ಪ್ರತಿ ತಿಂಗಳಿಗೆ ರೂಪಾಯಿ 1000 ರಂತೆ ಮಾಶಾಸನ ಮಂಜೂರಾಗಿದ್ದು ಇದರ ಕೈಪಿಡಿಯನ್ನು ಕಲ್ಕುಡ ದೈವಸ್ಥಾನದ ವಠಾರದಲ್ಲಿ ಹಸ್ತಾಂತರಿಸಲಾಯಿತು.















ಶ್ರೀ ಕಲ್ಕುಡ ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ, ಸುಳ್ಯ ವಲಯ ಮೇಲ್ವಿಚಾರಕ ದಿನೇಶ್, ವಲಯ ಅಧ್ಯಕ್ಷ ಮನೋಹರ್, ಸೇವಾ ಪ್ರತಿನಿಧಿ ಸೌಜನ್ಯ ಹಾಗೂ ಇತರ ಸದಸ್ಯರು ಇದ್ದರು.










