ಲಾರಿಗಳ ಅಡ್ಡೆ ಯಂತೆ ಕಾಣುತ್ತಿರುವ ಸುಳ್ಯ ಪೊಲೀಸ್ ಠಾಣಾ ವಠಾರ

0

ಅಕ್ರಮ ಕೆಂಪು ಕಲ್ಲು ಸಾಗಾಟ ಮತ್ತು ತೆರಿಗೆ ಇಲಾಖೆಯವರು ವಶ ಪಡಿಸಿಕೊಂಡ ಲಾರಿಗಳ ಸಾಲು

ಸುಳ್ಯ ಪೊಲೀಸ್ ಠಾಣಾ ವಠಾರದಲ್ಲಿ ಸುಮಾರು 6,7 ಲಾರಿಗಳು ನಿಂತಿದ್ದು ಪರಿಸರ ಲಾರಿಗಳ ಅಡ್ಡದಂತೆ ಕಾಣತೊಡಗಿದೆ.


ಇತ್ತೀಚಿನ ಕೆಲವು ದಿನಗಳ ಹಿಂದೆ ಸುಳ್ಯ ಪರಿಸರದಲ್ಲಿ ಕೆಂಪು ಕಲ್ಲು ಅಕ್ರಮ ಸಾಗಾಟದ ಲಾರಿಗಳನ್ನು ಸುಳ್ಯ ಪೊಲೀಸರು ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಂಡಿದ್ದು ಅದರ ನಿಯಮ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಾರಿಗಳನ್ನು ಸ್ಟೇಷನ್ ಬಳಿ ನಿಲ್ಲಿಸಲಾಗಿದೆ. ಮತ್ತೊಂದೆಡೆ ಮಂಗಳೂರಿನ ತೆರಿಗೆ ಇಲಾಖೆ ಅಧಿಕಾರಿಗಳು ಸುಳ್ಯದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲೆ ಪತ್ರಗಳಿಲ್ಲದೇ ಇರುವ ಲಾರಿಗಳನ್ನು ವಶ ಪಡಿಸಿಕೊಂಡಿದ್ದು ಅದು ಕೂಡ ಠಾಣೆಯ ಪರಿಸರದಲ್ಲಿ ತಂದು ನಿಲ್ಲಿಸಲಾಗಿದೆ.

ವಾರಕ್ಕೆ ಒಂದು ಬಾರಿ ಮಂಗಳೂರು ತೆರಿಗೆ ಇಲಾಖೆಯ ಅಧಿಕಾರಿಗಳು ಸುಳ್ಳದಲ್ಲಿ ಘನ ವಾಹನಗಳ ತಪಾಸಣೆ ನಡೆಸುತ್ತಿದ್ದು ಸರಕು ಸಾಮಗ್ರಿಗಳನ್ನು ಕೊಂಡಯ್ಯುವ ವೇಳೆ ಸರಿಯಾದ ಮಾಹಿತಿ ಮತ್ತು ದಾಖಲೆಗಳಿಲ್ಲದ್ದಲ್ಲಿ ಅವುಗಳನ್ನು ವಶಪಡಿಸುವ ಕಾರ್ಯ ಕೂಡ ನಡೆಯುತ್ತಿದೆ.

ಒಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ತೆರಿಗೆ ಇಲಾಖೆಯ ಬಿಗುವಿನ ಕಾರ್ಯಾಚರಣೆಯಿಂದಠಾಣಾ ಪರಿಸರದಲ್ಲಿ ಲಾರಿ ಗಳ ಅಡ್ಡವಾಗಿ ಕಂಡು ಬರ ತೊಡಗಿದೆ.