ಡಿಸೆಂಬರ್ ತಿಂಗಳಲ್ಲಿ ಸುಳ್ಯ ಸ.ಪ.ಪೂ.ಕಾಲೇಜು ಅಮೃತಮಹೋತ್ಸವ

0

ಅಕ್ಷರ ದಾಸೋಹ‌ ಕಟ್ಟಡ, ಮೈದಾನಕ್ಕೆ ಗ್ಯಾಲರಿ ಸಹಿತ 1 ಕೋಟಿ 25 ಲಕ್ಷ ವೆಚ್ಚದ ಪ್ರಾಜೆಕ್ಟ್

ಪ್ರತಿಯೊಬ್ಬರ ಸಹಕಾರ ಬೇಕು : ಅಮೃತಮಹೋತ್ಸವ ಸಮಿತಿ ಪತ್ರಿಕಾಗೋಷ್ಠಿ

ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು 75 ವರ್ಷ ಗಳನ್ನು ಪೂರೈಸುತ್ತಿದ್ದು ಇದರ ಅಮೃತಮಹೋತ್ಸವ ಕಾರ್ಯಕ್ರಮ 2025 ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಅಮೃತಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈಗಳು ತಿಳಿಸಿದ್ದಾರೆ.

ಆ.13ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ‌ನಡೆಸಿದ ಅವರು “ಅಮೃತಮಹೋತ್ಸವ ಕಾರ್ಯಕ್ರಮ ಆಚರಿಸುವ ನಿಟ್ಟಿನಲ್ಲಿ ಜು.12ರಂದು ಪೂರ್ವಭಾವಿ ಸಭೆ‌ ನಡೆಸಲಾಗಿದೆ. ಸಭೆಯಲ್ಲಿ ಸಮಿತಿ ಅಧ್ಯಕ್ಷರಾಗಿ ಸವಣೂರು ಸೀತಾರಾಮ ರೈ, ಉಪಾಧ್ಯಕ್ಷರಾಗಿ ಡೇವಿಡ್ ಧೀರಾ ಕ್ರಾಸ್ತ, ಲಿಂಗಪ್ಪ ಗೌಡ, ಮಂಜುಳಾ‌ ಬಡಿಗೇರ್, ಪಿ.ಬಿ.ಸುಧಾಕರ ರೈ, ಡಾ.ರಂಗಯ್ಯ, ಗಿರೀಶ್ ಡಿ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಸದಾಶಿವ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಂ.ಮುಸ್ತಫಾ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಖಜಾಂಜಿಯಾಗಿ ಅಶೋಕ್ ಪ್ರಭು, ಉಪಖಜಾಂಜಿಯಾಗಿ ರಾಮಚಂದ್ರ ಪಲ್ಲತಡ್ಕ, ಸಂಚಾಲಕರಾಗಿ ಮೋಹನ ಗೌಡ ಬೊಮ್ಮೆಟ್ಟಿ ಹಾಗೂ ಪ್ರಕಾಶ ಮೂಡಿತ್ತಾಯ ಇವರನ್ನು ಆರಿಸಲಾಯಿತು.

ಅಮೃತಮಹೋತ್ಸವ ನೆನಪಿಗಾಗಿ ಸಂಸ್ಥೆಗೆ ಉತ್ತಮ ಯೋಜನೆ ನೀಡಬೇಕೆನ್ನುವ ನಿಟ್ಟಿನಲ್ಲಿ 60 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಅಕ್ಷರದಾಸೋಹ ಕೊಠಡಿ ಮಾಡಲಿದ್ದೇವೆ. ಈ ಕಾಮಗಾರಿ ಗೆ ಆ. 18ರಂದು ಗುದ್ದಲಿಪೂಜೆ ನಡೆಯಲಿದೆ. ಎ.ಒ.ಎಲ್.ಇ. ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಗುದ್ದಲಿಪೂಜೆ ನಡೆಸಲಿದ್ದಾರೆ ಎಂದು ಹೇಳಿದರು. ಉಳಿದಂತೆ ಆಟದ ಮೈದಾನಕ್ಕೆ ಗ್ಯಾಲರಿ ಮತ್ತು ಸ್ಟ್ಯಾಂಡ್ ರೂ.25 ಲಕ್ಷ, ತಡೆಗೋಡೆ ರೂ.10‌ಲಕ್ಷ ಹಾಗೂ ನಿವೇಶನಕ್ಕೆ ಆವರಣ ರೂ.5 ಲಕ್ಷ ಮತ್ತು ಡಿಸೆಂಬರ್ ತಿಂಗಳಲ್ಲಿ ಕಾರ್ಯಕ್ರಮ ಸೇರಿ ರೂ.1 ಕೋಟಿ 25 ಲಕ್ಷ ಪ್ರಾಜೆಕ್ಟ್ ಹಾಕಿಕೊಳ್ಳಲಾಗಿದೆ. ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು, ಪೋಷಕರು ಎಲ್ಲರೂ ಸಹಕಾರ ನೀಡಬೇಕೆಂದು ಅವರು ಹೇಳಿದರು.

ಅಮೃತಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ
ಸದಾಶಿವರು ಮಾತನಾಡಿ “ನಮ್ಮ ಸಂಸ್ಥೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಎಲ್ಲ ಕ್ಷೇತ್ರದಲ್ಲೂ ಹೆಸರು ಗಳಿಸಿದೆ. ಇದುವರೆಗೆ ಇಲ್ಲಿ 21250 ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೊರ ಹೋಗಿದ್ದು ಅವರೆಲ್ಲರನ್ನು ಸಂಪರ್ಕಿಸಿ, ಎಲ್ಲರ ಸಹಕಾರ ಪಡೆದು ಕಾರ್ಯಕ್ರಮ ಮಾಡಲಿದ್ದೇವೆ. ಈ ಬಾರಿ ಎಸ್.ಎಸ್.ಎಲ್ ಸಿ.ಯಲ್ಲಿ ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ಪಡೆದ ಸಂಸ್ಥೆ ಎಂದು ವಿವರ ನೀಡಿದರು.

ಸಂಘಟನಾ ಕಾರ್ಯದರ್ಶಿ ಕೆ.ಎಂ.ಮುಸ್ತಫಾ ಮಾತನಾಡಿ, ” ಸುಳ್ಯ ಸ.ಪ.ಪೂ. ಕಾಲೇಜಿಗೆ ದೊಡ್ಡ ಇತಿಹಾಸವಿದೆ. ಸುಳ್ಯದಲ್ಲಿ ತಾಲೂಕು ಕ್ರೀಡಾಂಗಣ ಇಲ್ಲ. ಇಲ್ಲಿಯ ಮೈದಾನದಲ್ಲೇ ಎಲ್ಲ ಕಾರ್ಯಕ್ರಮ ಆಗುತ್ತದೆ. ಡಿಸೆಂಬರ್ ನಲ್ಲಿ ಎರಡು ದಿನ ನೆನಪಿನಲ್ಲಿಟ್ಟುಕೊಳ್ಳುವಂತ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ ಹಾಗೂ ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯರು ಮಾತನಾಡಿ, “ಅರ್ಥಪೂರ್ಣ ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೂ ಅಕ್ಷರದಾಸೋಹ ನೀಡುವ ನಿಟ್ಟಿನಲ್ಲಿ ಚಿಂತನೆಗಳು ಇದೆ ಎಂದು ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ‌ ಮಂಜುಳಾ ಬಡಿಗೇರ, ಉಪಾಧ್ಯಕ್ಷ ಹಸೈನಾರ್ ಜಯನಗರ ಇದ್ದರು.