ಸುಳ್ಯ ರೋಟರಿ ಪ್ರೌಢ ಶಾಲೆಯಲ್ಲಿ ಆ.9ರಂದು ಇಂಟರಾಕ್ಟ್ ಕ್ಲಬ್ ನ 2025- 26 ನೇ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರಗಿತು. ಸುಳ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ. ಮೇಜರ್ ಡೋನರ್ ಡಾ.ರಾಮ್ ಮೋಹನ್ ರವರು ಪದಗ್ರಹಣವನ್ನು ನೆರವೇರಿಸಿ ಕ್ಲಬ್ ನ ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು.















ನೂತನ
ಅಧ್ಯಕ್ಷರಾಗಿ 10 ನೇ ತರಗತಿಯ ದಿಗಂತ್ ಕಲ್ಲುಗದ್ದೆ, ಕಾರ್ಯದರ್ಶಿ ಯಾಗಿ ಹಂಸಿಕ.ಕೆ.ಎಲ್. ಉಪಾಧ್ಯಕ್ಷರಾಗಿ 9 ನೇ ತರಗತಿಯ ಚರಿಷ್ಮ. ರೈ.
ಜತೆ ಕಾರ್ಯದರ್ಶಿಯಾಗಿ ವಂದಿತ. ವಿ ಎಸ್., ದಂಡಾಧಿಕಾರಿಯಾಗಿ ಕೌಶಿಕ್ ಪ್ರಭು, ಕೋಶಾಧಿಕಾರಿಯಾಗಿ ಅಖಿಲ್ ಕೆ, ಕ್ಲಬ್ ಸೇವಾ ನಿರ್ದೇಶಕರಾಗಿ ಪೂರ್ವಿಕ. ಆರ್ ಕೆ. ಸಮಾಜ ಸೇವಾ ನಿರ್ದೇಶಕರಾಗಿ ವಂಶಿ ಬಿ. ಆರ್, ಶೈಕ್ಷಣಿಕ ಸೇವಾ ನಿರ್ದೇಶಕರಾಗಿ ಮೇಘನಾ. ಎಮ್ .ಆರ್, ಅಂತರಾಷ್ಟ್ರೀಯ ಸೇವಾ ನಿರ್ದೆಶಕರಾಗಿ ಕೃಷ್ಣ ಕಿಶೋರ್ ಭಾರದ್ವಾಜ್, ಮತ್ತು ಸಾಂಸ್ಕ್ರತಿಕ ನಿರ್ದೇಶಕರಾಗಿ ತೃಷಾ.ವಿ. ಪಡ್ಪು, ಆಯ್ಕೆಯಾದರು. ಶಾಲಾ ಸಂಚಾಲಕರಾದ ರೋ PP MPHF .ಪ್ರಭಾಕರನ್ ನಾಯರ್ ,ಟೃಸ್ಟಿ ರೋ. ಪಿ ಪಿ. ಡಾ.ಪುರುಷೋತ್ತಮ ಕೆ. ರೋಟರಿ ಕ್ಲಬ್ ಕಾರ್ಯದರ್ಶಿಯಾದ ರೋ. ಭಾಸ್ಕರ್ ಎಮ್. ಆರ್
ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೊಪಾಧ್ಯಯಿನಿ ಶ್ರೀಮತಿ. ವೀಣಾ ಶೇಡಿಕಜೆ, ಪದವಿಪೂರ್ವ ಪ್ರಾಂಶುಪಾಲರಾದ ಶೋಭ ಬೊಮ್ಮೆಟ್ಟಿ, ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಮೇಘನಾ ಎಮ್.ಆರ್. ಇವರ ಪ್ರಾರ್ಥನೆ ಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ನಿರ್ಗಮಿತ ಅಧ್ಯಕ್ಷೆ ಹಿಮಾನಿ ಸ್ವಾಗತಿಸಿದರೆ , ಜತೆ ಕಾರ್ಯದರ್ಶಿ ವಂದಿತ ಎಲ್ಲರನ್ನು ವಂದಿಸಿದರು.ಚರಿಷ್ಮ.ರೈ ಮತ್ತು ಮನುಜ್ಞ. ಯು. ಬಿ ಕಾರ್ಯಕ್ರಮ ನಿರೂಪಿಸಿದರು.










