ಅಮ್ಮನ ನೆನಪಿನಲ್ಲಿ ಪಾರ್ಥ ಸಾರಥಿ ವಾಹನದಲ್ಲಿ ಸಾರ್ವಜನಿಕರಿಗೆ ಒಂದು ದಿನದ ಉಚಿತ ಪ್ರಯಾಣ
ಅಮರಪಡ್ನೂರು ಗ್ರಾಮದ ಪುಳಿಮಾರಡ್ಕ ದಿ. ಕೃಷ್ಣಪ್ಪ ಗೌಡ ರವರ ಪತ್ನಿ ಶತಾಯುಷಿ ಶ್ರೀಮತಿ ಹೂವಮ್ಮ ಪುಳಿಮಾರಡ್ಕ ರವರು ಜು. 29 ರಂದು ನಿಧಾನರಾಗಿದ್ದು ಮೃತರಿಗೆ ಸಾರ್ವಜನಿಕ ಶ್ರದ್ದಾಂಜಲಿ ನುಡಿನಮನ ಕಾರ್ಯಕ್ರಮ ಪುಳಿಮಾರಡ್ಕ ಮನೆಯಲ್ಲಿ ಆ. 13 ರಂದು ನಡೆಯಿತು.
ಮೃತರ ಜೀವನಗಾಥೆಯ ಕುರಿತು ಶಿಕ್ಷಕ ನಾರಾಯಣ ಬೊಳ್ಳೂರು, ರಾಜಕೀಯ ಧುರಿಣ ಯತೀಶ್ಆ ರ್ವಾರ ರವರು ನುಡಿನಮನ ಸಲ್ಲಿಸಿದರು.















ಈ ಸಂದರ್ಭದಲ್ಲಿ ಪುತ್ರರಾದ ಚೊಕ್ಕಾಡಿ ಸೊಸೈಟಿ ಮಾಜಿ ಅಧ್ಯಕ್ಷ ಪಿ. ಕೆ. ರಾಘವೇಂದ್ರ ಪುಳಿಮಾರಡ್ಕ, ಪಿ. ಕೆ. ಕರುಣಾಕರ ಗೌಡ ಪುಳಿಮಾರಡ್ಕ, ಪಿ. ಕೆ. ಜಯರಾಮ ಪುಳಿಮಾರಡ್ಕ, ಪುತ್ರಿಯರಾದ ಶ್ರೀಮತಿ ಜಯಶೀಲಾ, ಶ್ರೀಮತಿ ಶಾರದಾ, ಶ್ರೀಮತಿ ಸರೋಜ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.
ಅಗಲಿದ ಶತಾಯುಷಿ ಅಮ್ಮನವರ ಶ್ರದ್ದಾಂಜಲಿ (ಆ.13)ಕಾರ್ಯಕ್ರಮದಂದು ಪುಳಿಮಾರಡ್ಕ ಸಹೋದರರ ಮಾಲಕತ್ವದ ಪಾರ್ಥ ಸಾರಥಿ ಎರಡು ವ್ಯಾನ್ ನಲ್ಲಿ ಕುಕುಜಡ್ಕದಿಂದ ಚೊಕ್ಕಾಡಿಯಾಗಿ ಬೆಳ್ಳಾರೆಗೆ ಮತ್ತು ಸುಳ್ಯಕ್ಕೆ ಹೋಗುವ ಪ್ರಯಾಣಿಕರಿಗೆ ಒಂದು ದಿನದ ಉಚಿತ ಪ್ರಯಾಣ ಕಲ್ಪಿಸಲಾಗಿತ್ತು.










