ಸುಳ್ಯ ಇನ್ನರ್‌ವೀಲ್ ಕ್ಲಬ್‌ಗೆ ಜಿಲ್ಲಾಧ್ಯಕ್ಷರ ಭೇಟಿ-ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

0

ಸಂಘದ ಸರ್ವತೋಮುಖ ಬೆಳವಣಿಗೆಗೆ ಉತ್ತಮ ಕಾರ್ಯದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಳ್ಳಿ: ಶಬರಿ ಕಡಿದಾಳ್

ಸುಳ್ಯ ಇನ್ನರ್‌ವೀಲ್ ಕ್ಲಬ್‌ಗೆ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಆ.12ರಂದು ಭೇಟಿ ನೀಡಿದರು. ಸಭಾ ಕಾರ್ಯಕ್ರಮವು ಸದರ್ನ್ ರೆಸಿಡೆನ್ಸಿಯ ಸಂಭ್ರಮ ಸಭಾಂಗಣದಲ್ಲಿ ಜರುಗಿತು.

ಬೆಳಗ್ಗೆ ಸಂಘದ ಸದಸ್ಯರೊಂದಿಗೆ ಜಿಲ್ಲಾಧ್ಯಕ್ಷರು ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಗೆ ತೆರಳಿ ಇನ್ನರ್‌ವೀಲ್ ಕ್ಲಬ್ ವತಿಯಿಂದ ಸೇವಾಯೋಜನೆಯ ಅಂಗವಾಗಿ ಸ್ಮಾರ್ಟ್ ಟಿವಿ, 2 ಡಸ್ಟ್ ಬಿನ್ ಅನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಇನ್ನರ್‌ವೀಲ್ ಕ್ಲಬ್ ಸುಳ್ಯದ ಅಧ್ಯಕ್ಷೆ ಡಾ.ಸವಿತಾ ಹೊದ್ದೆಟ್ಟಿ , ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಕ್ಲಬ್‌ನ ವತಿಯಿಂದ ವೀಲ್‌ಚಯರ್, ಅರ್ಥಿಕ ನೆರವು, ಸ್ಕೂಲ್ ಬ್ಯಾಗ್ ಮತ್ತು ಕಲಿಕೋಪಕರಣಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇನ್ನರ್‌ವೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ಡಾ.ಸವಿತಾ ಹೊದ್ದೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಡಾ.ಪ್ರಜ್ಞಾ ಎಂ.ಆರ್. ಕ್ಲಬ್‌ನ ಸರ್ವ ಕಾರ್ಯಕ್ರಮಗಳ ವಿವರ ನೀಡಿದರು. ಬಳಿಕ ಎಡಿಟರ್ ಸೌಮ್ಯ ಮಾತನಾಡಿದರು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮಮೋಹನ್ ನ್ಯೂಸ್ ಬುಲೆಟಿನ್ ಬಿಡುಗಡೆಗೊಳಿಸಿ ಶುಭಹಾರೈಸಿದರು. ನಿಕಟ ಪೂರ್ವಾಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ ಜಿಲ್ಲಾಧ್ಯಕ್ಷರನ್ನು ಪರಿಚಯಿಸಿದರು.

ಬಳಿಕ ಜಿಲ್ಲಾಧ್ಯಕ್ಷೆ ಶಬರಿಯವರು ಮಾತನಾಡಿ “ಸಂಘದ ಸರ್ವತೋಮುಖ ಬೆಳವಣಿಗೆಗೆ ಉತ್ತಮ ಕಾರ್ಯದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಳ್ಳಿ, ಹಾಗೂ ಸಂಘದ ಸದಸ್ಯರಿಗೆ ಕೆಲ ಕಿವಿ ಮಾತುಗಳನ್ನು” ಹೇಳಿ ಶುಭಹಾರೈಸಿದರು.

ಕಾರ್ಯಕ್ರಮದ ಪ್ರೋಜೆಕ್ಟ್ ವಿವರಣೆಯನ್ನು ಜೊತೆ ಕಾರ್ಯದರ್ಶಿ ಶ್ರೀಮತಿ ಸುಜಾತಾ ಕಾಮತ್ ನಡೆಸಿದರು. ಬಳಿಕ ಸ್ಪರ್ಧೆಗಳ ಬಹುಮಾನ ವಿಜೇತರನ್ನು ಐಎಸ್‌ಒ ಶ್ರೀಮತಿ ಉಷಾ ಶೆಟ್ಟಿ ನಡೆಸಿಕೊಟ್ಟರು. ಡಾ.ಹರ್ಷಿತಾ ಪುರುಷೋತ್ತಮ್ ವಂದಿಸಿ ಪೂರ್ವಾಧ್ಯಕ್ಷೆಯರಾದ ಶ್ರೀಮತಿ ಯೋಗಿತಾ ಮತ್ತು ಶ್ರೀಮತಿ ಜಯಮಣಿ ಮಾದವ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಇನ್ನರ್‌ವೀಲ್ ಸದಸ್ಯರು, ಗಣ್ಯರು ಹಾಜರಿದ್ದರು.