ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮತ್ತು ವಿಜಯದಶಮಿ ಉತ್ಸವ ಆಚರಣೆಯ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಆಡಳಿತ ಸಮಿತಿ ಅಧ್ಯಕ್ಷ ವಿದ್ಯಾಧರ ಡಿ.ಎಸ್. ಅಧ್ಯಕ್ಷತೆ ವಹಿಸಿದ್ದರು.















ಸಭೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ, ಉಪಾಧ್ಯಕ್ಷ ಲೀಲಾವತಿ, ವಾಸುದೇವ ಕೊಶಧಿಕಾರಿ ಡಿ. ಕೆ. ಸುಭಾಶ್, ಕಾರ್ಯದರ್ಶಿ ಎಸ್. ಎನ್. ಪ್ರಭಾಕರ, ಆಡಳಿತ ಮಂಡಳಿಯ ನಿಕಟಪೂರ್ವಾಧ್ಯಕ್ಷ ಗಿರೀಶ್ ಡಿ. ಎಸ್. , ಉತ್ಸವ ಸಮಿತಿ ಸಂಚಾಲಕ ಡಿ. ಕೆ. ಪ್ರದೀಪ್, ಸದಸ್ಯ ಡಿ.ಕೆ. ಸಂದೀಪ್ ಹಾಗೂ ಉತ್ಸವ ಸಮಿತಿ ಸದಸ್ಯರು, ಆಡಳಿತ ಸಮಿತಿ ಸದಸ್ಯರು, ಊರ ಭಕ್ತರು ಉಪಸ್ಥಿತರಿದ್ದರು.










