ಸುಳ್ಯ ತಾಲೂಕು ಚೆಸ್ ಅಸೋಸಿಯೇಷನ್ ವತಿಯಿಂದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ ಬಾಳಿಲ-ಮುಪ್ಪೇರ್ಯ ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಚೆಸ್ ತರಗತಿ ಆ. 13 ರಂದು ಸಂಜೆ ಮುಪ್ಪೇರ್ಯದ ಶ್ರೀ ಧರ್ಮಶಾಸ್ತಾ ಸೇವಾ ಟ್ರಸ್ಟ್ ನ ಸಭಾಂಗಣದಲ್ಲಿ ನಡೆಯಿತು. ಚೆಸ್ ತರಬೇತುದಾರರಾದ ಹರಿಪ್ರಸಾದ್ ಕೊಯಿoಗಾಜೆ ಕಾರ್ಯಕ್ರಮಕೆ ಚಾಲನೆ ನೀಡಿದರು.
















ಶ್ರೀ ಮಹಾವಿಷ್ಣು ಮಕ್ಕಳ ಯಕ್ಷಗಾನ ತಂಡದ ಅಧ್ಯಕ್ಷ ಸುಜಿತ್ ರೈ ಪಟ್ಟೆ, ಅಯ್ಯನಕಟ್ಟೆ ಸ.ಉ.ಹಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ ಮಣಿಮಜಲು, ಶ್ರೀ ಮಹಾವಿಷ್ಣು ಶಾಸ್ತ್ರೀಯ ಸಂಗೀತ ತಂಡದ ಅಧ್ಯಕ್ಷ ರಮೇಶ್ ಕಲ್ಮಡ್ಕ, ಅವಿನಾಶ್ ದೇವರಮಜಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮರಂಗಲ, ಶ್ರೀ ಮಹಾವಿಷ್ಣು ಭರತನಾಟ್ಯ ತಂಡದ ಅಧ್ಯಕ್ಷ ಜಗನ್ನಾಥ ಊರುಂಬಿ, ವಿದ್ಯಾಬೋಧಿನೀ ಹಿ.ಪ್ರಾ. ಶಾಲೆಯ ಶಿಕ್ಷಕಿ ಶ್ರೀಮತಿ ರಮ್ಯಶ್ರೀ ಉಪಸ್ಥಿತರಿದ್ದರು. ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ ಅಧ್ಯಕ್ಷ ಲೋಕೇಶ್ ಬೆಳ್ಳಿಗೆ ಸ್ವಾಗತಿಸಿ, ವಂದಿಸಿದರು.










