ಕುಕ್ಕುಜಡ್ಕದಲ್ಲಿ ನಿರ್ಮಾಣಗೊಳ್ಳುತ್ತಿದೆ ಸುಸಜ್ಜಿತ ಅಟೋ ನಿಲ್ದಾಣ

0

ಅಮರಮುಡ್ನೂರಿನ ಕುಕ್ಕುಜಡ್ಕದ ವಿಷ್ಣು ನಗರದಲ್ಲಿ ಸುಸಜ್ಜಿತ
ರಿಕ್ಷಾ ತಂಗುದಾಣವು ನಿರ್ಮಾಣಗೊಳ್ಳುತ್ತಿದ್ದು ಇನ್ನೂ ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ.


ಸುಳ್ಯ ವಿಧಾನ ಸಭಾ ಕ್ಷೇತ್ರದ
ಶಾಸಕಿ ಕು. ಭಾಗಿರಥಿ ಮುರುಳ್ಯರವರ ವಿಶೇಷ ಅನುದಾನ ರೂ.10 ಲಕ್ಷ ವೆಚ್ಚದಲ್ಲಿ ಆಟೋ ನಿಲ್ದಾಣದ ಕಾಮಗಾರಿ ಕೆಲಸವು ಪ್ರಗತಿಯಲ್ಲಿದೆ. ಈಗಾಗಲೇ ಮೇಲ್ಚಾವಣಿ ಸಿದ್ಧಗೊಂಡಿದ್ದು ಕೊನೆಯ ಹಂತದ ಕೆಲಸ ಕಾರ್ಯಗಳು ಮಾತ್ರ ಬಾಕಿ ಉಳಿದಿದೆ. ಈ ಭಾಗದಲ್ಲಿ ಸುಮಾರು 30 ಕ್ಕೂ ಹೆಚ್ಚು ರಿಕ್ಷಾಗಳಿದ್ದು ನಿಲ್ದಾಣದ ಸದುಪಯೋಗವಾಗಲಿದೆ. ಬಹು ವರ್ಷದ ಬೇಡಿಕೆ ಈಡೇರಿದ ಕುರಿತು ಆಟೋ ಚಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.