ಬಾಳಿಲ ಗ್ರಾಮ ಪಂಚಾಯತ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

0

ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ “ ಹರ್ ಘರ್ ತಿರಂಗಾ ಹರ್ ಘರ್ ಸ್ವಚ್ಚತಾ “ ಅಭಿಯಾನದಡಿ ಸ್ವಚ್ಚತಾ ಕಾರ್ಯಕ್ರಮವನ್ನು ಆ.13 ರಂದು ಹಮ್ಮಿಕೊಳ್ಳಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಸರಿತಾ ಓಲ್ಗಾ ಡಿಸೋಜಾ ಇವರು ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ವಚ್ಚತಾ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಪಾವನ ಕೆ, ಉಪಾಧ್ಯಕ್ಷರಾದ ಶ್ರೀ ರಮೇಶ್ ರೈ ಎ, ಸದಸ್ಯರಾದ ಶ್ರೀಮತಿ ತ್ರಿವೇಣಿ ಕೆ ವಿ, ಶ್ರೀಮತಿ ಸವಿತಾ ಕೆ, ಜೆ ಹರ್ಷ ಭಟ್, ಗ್ರಾ.ಪಂ ಕಾರ್ಯದರ್ಶಿ ಜಯಶೀಲ ರೈ ಬಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಜಾಹ್ನವಿ ಕಾಂಚೋಡು, ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ಹಾಜರಿದ್ದರು. ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಘ ಸಂಸ್ಥೆಗಳಾದ ನಾಗರೀಕ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ, ಶ್ರೀ ದೇವತಾರಾಧನ ಸಮಿತಿ ಬಾಳಿಲ ಮುಪ್ಪೇರ್ಯ, ಶ್ರೀ ಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ, ಶ್ರೀ ಕೃಷ್ಣ ಜನ್ಮಾಷ್ಠಮಿ ಸೇವಾ ಟ್ರಸ್ಟ್, ಸಂಜೀವಿನಿ ಒಕ್ಕೂಟ ಬಾಳಿಲ ಮುಪ್ಪೇರ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ, ಸ್ರೀ ಶಕ್ತಿ ಸಂಘಗಳ ಒಕ್ಕೂಟ ಬಾಳಿಲ – ಮುಪ್ಪೇರ್ಯ, ಯುವಾ ಸೇವಾ ಸಂಘ ಮುಪ್ಪೇರ್ಯ ಇದರ ಪದಾಧಿಕಾರಿಗಳು , ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಬೆಳ್ಳಾರೆ ನಿಂತಿಕಲ್ಲು ರಾಜ್ಯ ಹೆದ್ದಾರಿಯ ಬದಿಯಲ್ಲಿ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸ್ಸು ತಂಗುದಾಣಗಳನ್ನು ಸ್ವಚ್ಛತೆ ಮಾಡಲಾಯಿತು. ಗ್ರಾಮ ಪಂಚಾಯತ್ ನ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡದಂತೆ ಎಚ್ಚರಿಕೆಯ ಭಿತ್ತಿಪತ್ರಗಳನ್ನು ಹಚ್ಚಲಾಯಿತು.