ಎಡಮಂಗಲ : ಸ್ನೇಹ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

0

ಸ್ನೇಹ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಎಡಮಂಗಲ ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಆ. ೧೩ ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಬಲಕ್ಕಬೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ದೀಪ ಪ್ರಜ್ವಲನೆಯ ಮೂಲಕ ಒಕ್ಕೂಟದ ಅಧ್ಯಕ್ಷರು ಹಾಗೂ ವೇದಿಕೆಯಲ್ಲಿರುವ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


೨೦೨೪-೨೫ನೇ ಸಾಲಿನ ವಾರ್ಷಿಕ ವರದಿಯನ್ನು ಒಕ್ಕೂಟದ ಕಾರ್ಯದರ್ಶಿಯಾದ ಶ್ರೀಮತಿ ಲತಾ ರವರು ಮಂಡಿಸಿ, ಲೆಕ್ಕ ಪರಿಶೋಧನಾ ವರದಿಯನ್ನು ಒಕ್ಕೂಟದ ಪದಾಧಿಕಾರಿ ಶ್ರೀಮತಿ ದೀಪ್ತಿಯವರು ಮಂಡಿಸಿ ಅನುಮೋದನೆ ಪಡೆದರು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ರಾಮಣ್ಣ ಜಾಲ್ತಾರ್‌ರವರು ಸಂಜೀವಿನಿ ಒಕ್ಕೂಟದ ಸೌಲಭ್ಯವನ್ನು ಘನ ತ್ಯಾಜ ಘಟಕದ ನಿರ್ವಹಣೆ ಸರಿಯಾಗಿ ನಿರ್ವಹಿಸಲು ತಮ್ಮ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿ ಸಭೆಗೆ ಶುಭ ಹಾರೈಸಿದರು. ಡೇ-ಎನ್.ಆರ್.ಎಲ್.ಎಂ. ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಕರಾದ ಜಗತ್ ಕೆ. ಮಾತನಾಡಿ, ಡೇ- ಎನ್.ಆರ್.ಎಲ್.ಎಂ. ಯೋಜನೆಯ ಉದ್ದೇಶಗಳು, ಅಗತ್ಯತೆಗಳ ಬಗ್ಗೆ ಸಂಘದ ಸದಸ್ಯರಿಗೆ ಮನವರಿಕೆ ಮಾಡಿದರು. ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕರು ವಿಜಿತ್ ಸರ್ ಮತ್ತು ನೇತ್ರಾವತಿ ಯವರು ಒಕ್ಕೂಟದ ಸದಸ್ಯರಿಗೆ ಮಲ್ಲಿಗೆ ಕೃಷಿ ನಿರ್ವಹಣೆ ಹಾಗೂ ಮಾರುಕಟ್ಟೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಚಂದ್ರಾವತಿಯವರು ಪೌಷ್ಟಿಕ ಆಹಾರ ಹಾಗೂ ಮಾದಕ ವ್ಯಸನ ಮುಕ್ತ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ವಾರ್ಷಿಕ ಮಹಾಸಭೆಯಲ್ಲಿ ಜಗತ್‌ರವರು ಮಾದಕ ವ್ಯಸನ ಮುಕ್ತ ಪ್ರತಿಜ್ಞಾವಿಧಿ ಬೋಧಿಸಿದರು.
ಸಭಿಕರಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಸದಸ್ಯರಿಗೆ ಪೌಷ್ಟಿಕ ಆಹಾರ ಸ್ಪರ್ಧೆ ಏರ್ಪಡಿಸಿ, ಬಹುಮಾನವನ್ನು ವಿತರಿಸಲಾಯಿತು. ಆರೋಗ್ಯ ತಪಾಸಣಾ ಶಿಬಿರವನ್ನು ಒಕ್ಕೂಟದ ವತಿಯಿಂದ ಏರ್ಪಡಿಸಲಾಯಿತು.
ಒಕ್ಕೂಟದ ಅಧ್ಯಕ್ಷರು ಸ್ವಾಗತಿಸಿ, ಒಕ್ಕೂಟದ ಪದಾಧಿಕಾರಿಯಾದ ಶ್ರೀಮತಿ ಲೀಲಾವತಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭವ್ಯ ಮುಖ್ಯ ಪುಸ್ತಕ ಬರಹಗಾರರು ನಿರ್ವಹಿಸಿದರು.
ಸಭೆಯಲ್ಲಿ ಮೋಹನ್ ತಾಲೂಕು ವ್ಯವಸ್ಥಾಪಕರು (ಕೃಷಿ), ತಾಲೂಕು ವಲಯ ಮೇಲ್ವಿಚಾರಕರು ಸುವಿನ ತಾಲೂಕು ಡೇಟಾ ಎಂಟ್ರಿ ಆಪರೇಟರ್ ಕು.ಭಾರತಿ, ತಾಲೂಕು ಸಂಪನ್ಮೂಲ ವ್ಯಕ್ತಿ ಉದ್ಯಮಶೀಲತ ಉತ್ತೇಜನ ಶ್ರೀಮತಿ ರಮ್ಯಾ ಸ್ವಸಹಾಯ ಸಂಘಗಳ ಸದಸ್ಯರು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಒಕ್ಕೂಟ ಸಿಬ್ಬಂದಿಗಳು ಒಟ್ಟು ೧೦೫ ಸದಸ್ಯರು ಉಪಸ್ಥಿತರಿದ್ದರು.