
ಮುರುಳ್ಯ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ, ಮತ್ತು ಶ್ರೀ ಮಹಾ ವಿಷ್ಣು ದೇವಸ್ಥಾನದಲ್ಲಿ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತು ಕಲ್ಪಡ ಶಿವರಾಮ ಉಪಾಧ್ಯಾಯವರ ನೇತೃತ್ವದಲ್ಲಿ ವೈಧಿಕ ಕಾರ್ಯಕ್ರಮ ನಡೆಯಿತು. ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಬಲಡ್ಕರವರು ಧಾರ್ಮಿಕ ಉಪನ್ಯಾಸ ನೀಡಿದರು. ಶಾಸಕರಾದ ಕು. ಭಾಗೀರಥಿ ಮುರುಳ್ಯ ಕಾರ್ಯಕ್ರಮದ ಬಗ್ಗೆ ಮಾತಾಡಿದರು.
















ಈ ಸಂದರ್ಭದಲ್ಲಿ ಅವಳಿ ದೇವಸ್ಥಾನಗಳ ಅಧ್ಯಕ್ಷರುಗಳಾದ ನ್ಯಾಯವಾದಿ ಜಗದೀಶ್ ಹುದೇರಿ, ಭುವನೇಶ್ವರ ಪೂದೆ, ಕಾರ್ಯದರ್ಶಿಗಳಾದ ಹರೀಶ್ ಹುದೇರಿ, ರಾಜೇಶ್ ಗೋಳ್ತಿಲ, ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಭುವನೇಶ್ವರ ಪೂದೆ, ಭಜನಾ ಮಂಡಳಿ ಅಧ್ಯಕ್ಷ ಅಶೋಕ್ ಪೂದೆ, ಅನ್ನನಿಧಿ ಸಮಿತಿ ಅಧ್ಯಕ್ಷ ರೋಹಿತ್ ಹೆದ್ದಾರಿ, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕೊಚ್ಚಿ ಪೂದೆ, ಪೂಜಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಗೀತಾ ವಸಂತ ಪೂದೆ, ಸದಸ್ಯರುಗಳು ವ್ಯವಸ್ಥಾಪನ ಸಮಿತಿ ಸದಸ್ಯರುಗಳು, ವಿವಿಧ ಸೇವಾ ಸಮಿತಿ ಸದಸ್ಯರುಗಳು ಭಕ್ತಾ ಜನರು ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಪುರುಷೋತ್ತಮ ಪ್ರಾರ್ಥನೆ ಮಾಡಿದರು. ಶ್ರೀಮತಿ ನೇತ್ರಾವತಿ ಗೋಳ್ತೀಲ ಸ್ವಾಗತಿಸಿದರು, ಶ್ರೀಮತಿ ಗೀತಾ ಕುಶಾಲಪ್ಪ ಕೋಡಿಯಡ್ಕ ಮತ್ತು ಶಿಕ್ಷಕಿ ಶ್ರೀಮತಿ ಕುಸುಮವತಿ ಪುಟ್ಟಣ್ಣ ಆಚಾರ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ











