ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಟಿದ ಸೊಗಡ್

0

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಟಿದ ಸೊಗಡ್ ಕಾರ್ಯಕ್ರಮ ಆ. ೧೩ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಸ್ವಾತಿ ಆರ್ ಭಟ್ ವರಾಹ ಮೆಡಿಕಲ್ ಮತ್ತು ಸ್ಪೆಷಾಲಿಟಿ ಕ್ಲಿನಿಕ್ ಸವಣೂರು ಇವರು ಕಾರ್ಯಕ್ರಮಕ್ಕೆ ಶುಭಹಾರೈಕೆಯನ್ನು ನೀಡುವುದರ ಜೊತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ರಾಜಲಕ್ಷ್ಮೀ ಎಸ್ ರೈ ಅವರು ಆಟಿ ತಿಂಗಳಲ್ಲಿ ಭೂಮಿ ತಾಯಿ ತುಂಬಾ ಸಂತೋಷದಿಂದಿದ್ದು ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ತಿನ್ನಲಾಗುವಂತಹ ತುಂಬ ತಿನಿಸುಗಳನ್ನು ನೀಡುತ್ತಾಳೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದಂತಹ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿಯವರು ಆಟಿಯ ಸಮಯದಲ್ಲಿ ನಾವು ಸೇವಿಸುವಂತಹ ಆಹಾರಗಳು ಔಷಧೀಯ ಗುಣವುಳ್ಳಂತಹುದು ಎನ್ನುವುದರ ಜೊತೆಗೆ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.

ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ ,ಸಿ.ಎ ಬ್ಯಾಂಕ್ ಸವಣೂರಿನ ನಿವೃತ್ತ (ಎ.ಇ.ಒ) ಶ್ರೀಮತಿ ಕುಸುಮಾ ಪಿ ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯ ಸವಣೂರಿನ ಅಸಿಸ್ಟೆಂಟ್ ಟೀಚರ್ ಶ್ರೀಮತಿ. ಹರ್ಷಿಣಿ ಪಿ. , ಹಾಗೂ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾದಶೇಷಗಿರಿ ಎಂ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಕಿರಣ ಚಂದ್ರ ರೈ ಸ್ವಾಗತಿಸಿ, ಉಪನ್ಯಾಸಕರಾದ ಗಿರೀಶ್ ಭಟ್ ವಂದಿಸಿದರು. ಪ್ರಥಮ ಬಿ.ಸಿ.ಎ ವಿದ್ಯಾರ್ಥಿ ಮೋಕ್ಷಿತ್ ಅವರ ಕೊಳಲುವಾದನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.


ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಆಟಿಗೆ ಸಂಬಂಧಪಟ್ಟ ಆಹಾರಮೇಳ ಹಾಗೂ ವಸ್ತುಪ್ರದರ್ಶನವನ್ನು ಏರ್ಪಡಿಸಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.