ಆ.15 : ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಧ್ವಜ ಸ್ತಂಭದ ಉದ್ಘಾಟನೆ

0


ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ದೇಶದ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ದಿ.ಕುರುಂಜಿ ರಾಮಯ್ಯ ಮಾಸ್ತರ್ ಸ್ಮರಣಾರ್ಥ ಕೊಡಮಾಡಿದ ನೂತನ ಧ್ವಜ ಸ್ತಂಭದ ಉದ್ಘಾಟನೆ ಅ.15 ರಂದು ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಲಿದ್ದಾರೆ.ಧ್ವಜ ಸ್ತಂಭ ಉದ್ಘಾಟನೆಯನ್ನು ಅರಂತೋಡು ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷರಾದ ನಿವೃತ ಮೋಖ್ಯೋಪಾಧ್ಯಾಯ ಜತ್ತಪ್ಪ ಎ.ಕೆ.ನೆರವೇರಿಸಲಿದ್ದಾರೆ.ಕಾರ್ಯಕ್ರಮದಲ್ಲಿ ನಿವೃತ ಪ್ರಾಂಶುಪಾಲರು ಧ್ವಜಸ್ತಂಭ ದಾನಿಗಳಾದ ಕೆ.ಆರ್.ಗಂಗಾಧರ ಕುರುಂಜಿ,ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಯು.ಕೆ,ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಭಾಗವಹಿಸಲಿದ್ದಾರೆ.