ಕಾಂಞಗಾಡ್- ಸುಳ್ಯ ಅಂತರ್ ರಾಜ್ಯ ಕೇರಳ ಸಾರಿಗೆ ಬಸ್ ಸಂಚಾರ ಆರಂಭ

0

ಕೊಲ್ಚಾರಿನಲ್ಲಿ ಆರತಿ ಬೆಳಗಿ ಸ್ವಾಗತ ಕೋರಿದ ನಾಗರಿಕರು

ಕಾಂಞಗಾಡ್ – ಬಂದಡ್ಕ- ಕೋಲ್ಚಾರು ಮಾರ್ಗವಾಗಿ ಸುಳ್ಯಕ್ಕೆ ಅಂತರಾಜ್ಯ ರಸ್ತೆಯಲ್ಲಿ ಕೇರಳ ಸಾರಿಗೆ ಬಸ್ ಸಂಚಾರ ಆ.14 ರಂದು ಆರಂಭಗೊಂಡಿತು.
ಬೆಳಗ್ಗೆ ಕಾಂಞಂಗಾಡಿನಿಂದ ಹೊರಟ ಬಸ್ಸು ಬಂದಡ್ಕದಿಂದ ಕೋಲ್ಚಾರಿಗೆ ಬರುವ ಸಂದರ್ಭದಲ್ಲಿ ಈ ಭಾಗದ ನಾಗರಿಕರು ಬಸ್ಸಿಗೆ ಹೂವಿನ ಹಾರ ಹಾಕಿ ಆರತಿ ಬೆಳಗಿ ತೆಂಗಿನಕಾಯಿ ಒಡೆದು ಸ್ವಾಗತ ಕೋರಿದರು.
ಬಸ್ಸಿನ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು, ಮಾಜಿ ಉಪಾಧ್ಯಕ್ಷ ಹರೀಶ್ ಕೊಯಿಂಗಾಜೆ, ಸದಸ್ಯರಾದ ಶ್ರೀಮತಿ ಗೀತಾ ಕೋಲ್ಚಾರು, ಶ್ರೀಮತಿ ಶಂಕರಿ ಕೊಲ್ಲರಮೂಲೆ, ಮಾಜಿ ಸದಸ್ಯರಾದ ಸೀತಾರಾಮ ಕೊಲ್ಲರ ಮೂಲೆ, ಪ್ರಮುಖರಾದ ಪುರುಷೋತ್ತಮ ಬೊಡ್ಡನ ಕೊಚ್ಚಿ, ಕರುಣಾಕರ ಹಾಸ್ಪಾರೆ, ಸುದರ್ಶನ
ಪಾತಿಕಲ್ಲು,ಚಿದಾನಂದ ಕೋಲ್ಚಾರು, ಪ್ರದೀಪ್ ಕೊಲ್ಲರಮೂಲೆ, ಮನೋಜ್ ಕೊಲ್ಚಾರ್ ಹಾಗೂ ಸ್ಥಳೀಯ ನಾಗರಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು. ಬಸ್ಸಿನಲ್ಲಿ ಸಂಚರಿಸಿದ ಪ್ರಯಾಣಿಕರಿಗೆ ಗೀತಾ ಕೊಲ್ಚಾರ್ ರವರು ಸಿಹಿ ಹಂಚಿದರು. ಶಾರದಾಂಬ ಕ್ಯಾಂಟಿನ್ ವತಿಯಿಂದ ಎಲ್ಲರಿಗೂ ಮಾಲ್ಟ್ ವಿತರಿಸಲಾಯಿತು.