














ರಾತ್ರಿ ವೇಳೆ ಪೆರಾಜೆ, ಉಬರಡ್ಕ ಭಾಗದಲ್ಲಿದ್ದ ಕಾಡಾನೆಗಳ ಹಿಂಡು ಇದೀಗ ಮರ್ಕಂಜದ ಅಜ್ಜಿಕಲ್ಲು, ಕಟ್ಟಕ್ಕೋಡಿ ಭಾಗಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.
ಪೂಮಲೆ ರಕ್ಷಿತಾರಣ್ಯಕ್ಕೆ ಬಂದ ಕಾಡಾನೆಗಳ ಹಿಂಡು ಪೆರಾಜೆ, ಉಬರಡ್ಕ ಭಾಗದ ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡುತ್ತಿತ್ತು. ನಿನ್ನೆ ಮೈರಾಜೆ ಕಡೆಗೆ ಬಂದಿದ್ದ ಕಾಡಾನೆಗಳು ಇದೀಗ ಅಜ್ಜಿಕಲ್ಲು, ಕಟ್ಟಕ್ಕೋಡಿ ಕಡೆಗೆ ಬಂದಿರುವುದಾಗಿ ತಿಳಿದು ಬಂದಿದೆ.










