ಕಕ್ಕೆಬೆಟ್ಟು – ಭರ್ಜರಿಗುಂಡಿ ರಸ್ತೆ ಸಂಪೂರ್ಣ ಕೆಸರುಮಯ-ಸಂಚಾರಕ್ಕೆ ತೀವ್ರ ತೊಂದರೆ
ದುರಸ್ತಿಗೆ ಊರವರ ಒತ್ತಾಯ
ಉಬರಡ್ಕದ ಕಕ್ಕೆಬೆಟ್ಟು ಕಡೆಯಿಂದ ಭರ್ಜರಿಗುಂಡಿಗೆ ಹೋಗುವ ರಸ್ತೆ ಸಂಪೂರ್ಣ ಕೆಸರುಮಯ ಗೊಂಡಿದೆ. ಈ ಮಾರ್ಗದಲ್ಲಿ ಸಂಚಾರಿಸಲು ಹರಸಾಹಸ ಪಡುವಂತಾಗಿದೆ.
















ಉಬರಡ್ಕ ಗ್ರಾಮದ ಭರ್ಜರಿಗುಂಡಿ ಎಸ್ ಟಿ ಮನೆಗಳು ಸೇರಿ ಸುಮಾರು 25ರಷ್ಟು ಮನೆಗಳಿವೆ. ಈ ಭಾಗದಿಂದ ಎಲಿಮಲೆ, ಸುಳ್ಯ, ಉಬರಡ್ಕ, ದೊಡ್ಡತೋಟ, ಆರಂತೋಡು ಶಾಲೆಗಳಿಗೆ ಹೋಗುವ ಮಕ್ಕಳಿದ್ದಾರೆ. ದಿನಾಂಪ್ರತಿ ಸಾರ್ವಜನಿಕರು ಓಡಾಡುತ್ತಾರೆ. ಆದರೆ ರಸ್ತೆ ಕೆಲವು ಕಡೆ ಕೆಸರುಮಯ ಗೊಂಡಿರುವ ಕಾರಣ ಸಂಚಾರಿಸಲು ಸಾಧ್ಯವೇ ಇಲ್ಲದಂತಾಗಿದೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರರು ಬಿದ್ದ ಘಟನೆಗಳು ನಡೆದಿದೆ. ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಬೇಕು ಎಂದು ಗ್ರಾಮ ಪಂಚಾಯತ್ ನ್ನು ಒತ್ತಾಯಿಸಿದರು ಯಾವುದೇ ಪ್ರಯೋಜನವಾಗದೇ ಸಮಸ್ಯೆ ಹಾಗೆಯೇ ಇದೆ. ಇನ್ನಾದರೂ ಕನಿಷ್ಠ ಪಕ್ಷ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಿಕೊಡಬೇಕು ಎಂದು ಫಲನುಭವಿಗಳು ಆಗ್ರಹಿಸಿದ್ದಾರೆ.











