ಸಂಘಟಿತ ಹಿಂದೂ ಶಕ್ತಿಯಿಂದ ಅಖಂಡ ಭಾರತ
ನಿರ್ಮಾಣದ ಕನಸು ನನಸಾಗಬೇಕಾಗಿದೆ : ಪುನೀತ್ ಅತ್ತಾವರ
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮ ಒಂದೆಡೆಯಾದರೆ ಅದೆಷ್ಟೋ ನಮ್ಮ ಹಿಂದೂ ಬಾಂಧವರನ್ನ ಕಳೆದುಕೊಂಡ ಕರಾಳ ದಿನವೂ ಹೌದು. ಇಂದು ನಾವು ಅತ್ಯಂತ ಸಂತೋಷ ಪಡುವ ವಿಚಾರವೆಂದರೆ ನಮ್ಮ ನಿರೀಕ್ಷೆಯಂತೆ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಮಹಾ ಕುಂಭಮೇಳ ನಡೆದಿದೆ ಪಾಕಿಸ್ತಾನ ಮತ್ತೆ ನಮ್ಮ ದೇಶದ ನಡುವೆ ನಡೆದ ಯುದ್ಧವನ್ನು ಆಪರೇಷನ್ ಸಿಂಧೂರದ ಮೂಲಕ ಕಂಡಿದ್ದೇವೆ . ಆದರೆ ಇನ್ನೂ ಕಾಣಬೇಕಾಗಿರುವುದು
ತ್ರಿಖಂಡವಾಗಿರುವ ನಮ್ಮ ಭಾರತ ದೇಶ ಮತ್ತೆ ಅಖಂಡವಾಗುವ ದಿನವನ್ನು ಕಾಣಬೇಕಾಗಿದೆ. ಅದಕ್ಕಾಗಿ ಹಿಂದೂ ಮನಸ್ಸುಗಳು ಒಂದುಗೂಡಬೇಕು ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳ ಮಂಗಳೂರು ವಿಭಾಗದ ಸಹ ಸಂಯೋಜಕ ಪುನೀತ್ ಅತ್ತಾವರ ಕರೆ ನೀಡಿದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ
ಆ. 14ರಂದು ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ಬೃಹತ್ ಪಂಜಿನ ಮೆರವಣಿಗೆ ಮತ್ತು ಅಖಂಡ ಭಾರತ ಸಂಕಲ್ಪ ದಿನದಂದು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ತುಷ್ಟಿಕರಣ ಎಂದರೆ ಪಾಕಿಸ್ತಾನಕ್ಕೆ ಜೈ ಹಾಕಿರುವವರು ಅಮಾಯಕರು, ಅದೇ ಗೋ ಹತ್ಯೆಯನ್ನು ಖಂಡಿಸುವ ಬಜರಂಗದಳದ ಕಾರ್ಯಕರ್ತರು ಮಾತ್ರ ರೌಡಿ ಶೀಟರ್. ನಮ್ಮ ಕಾರ್ಯಕರ್ತರಿಗೆ ಈ ರೀತಿಯ ಹಣೆಪಟ್ಟಿಯನ್ನು ಕಟ್ಟಿ ಅವರ ಮೇಲೆ ಕೇಸು ದಾಖಲಿಸುವ ದುಷ್ಕೃತ್ಯ ನಿರಂತರವಾಗಿ ನಡಿಯುತ್ತಿದೆ. ಅಹಿಂಸೆಯಿಂದಾಗಿ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಹಿಂದಿನ ಪಾಠವನ್ನು ಮತ್ತೆ ಮತ್ತೆ ನಮಗೆ ಹೇಳುತ್ತಿದ್ದಾರೆ. ಆದರೆ ಅದರ ಹಿಂದೆ ತ್ಯಾಗ ಬಲಿದಾನ ಮಾಡಿದಂತ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ವಿನಾಯಕ ಸಾವರ್ಕರ್, ಕೆದಂಬಾಡಿ ರಾಮಯ್ಯಗೌಡ ಇವರಂತಹ ವೀರ ಸೇನಾನಿಗಳ ಬಗ್ಗೆ ಇನ್ನೂ ಕೂಡ ನಮಗೆ ಬೋಧನೆಯಾಗುತ್ತಿಲ್ಲ ಇದು ನಮ್ಮ ದುರ್ದೈವ.
ಹಿಂದೂ ಸಮಾಜಕ್ಕೆ ಧಕ್ಕೆಯಾದರೆ ಬಜರಂಗದಳ ಕಾರ್ಯಕರ್ತರು ಯೋಧರಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.















ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧರಾದ ಹೇಮನಾಥ ಬಿ ಕೊಡಿಯಾಲಬೈಲು ರವರು ಮಾತನಾಡಿ ನಾನೊಬ್ಬ ಕಟ್ಟ ಹಿಂದುತ್ವವಾದಿ ಆರ್. ಎಸ್. ಎಸ್ ಸಂಘಟನೆಯ ಮೂಲಕ ಬೆಳೆದು ಬಂದವನು. ದೇಶದ ರಕ್ಷಣೆಗಾಗಿ ಇಂಡೋ
ಟಿಬೇಟಿಯನ್ ಗಡಿ ರಕ್ಷಣಾ ಪಡೆಯಲ್ಲಿಸೇರ್ಪಡೆಗೊಂಡು ಯೋಧರಾಗಿ ಸೇವೆ ಸಲ್ಲಿಸಿದ್ದೇನೆ.ಇದಕ್ಕೆ ನನಗೆ ಸ್ಪೂರ್ತಿ ಆರ್ ಎಸ್ ಎಸ್ ಸಂಘಟನೆ. ಸೈನ್ಯದ ಸೈನಿಕರಂತೆ ಹಿಂದೂ ಧರ್ಮಕ್ಕೆ ಅನ್ಯಾಯವಾದಾಗ ಎದುರಿಸುವ ಶಕ್ತಿ ಹೊಂದಿದ ಸಂಘಟನೆ ಅದು ಬಜರಂಗದಳ. ಈ ಸಂಘಟನೆ ಕಾರ್ಯಕರ್ತರು ಯೋಧರಂತೆ ದೇಶದ ಹಾಗೂ ಹಿಂದೂ ಧರ್ಮದ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್
ರವರು ಮಾತನಾಡಿ ಧರ್ಮದ ರಕ್ಷಣೆಗಾಗಿ ಸ್ಥಾಪನೆಯಾಗಿರುವ ಸಂಘಟನೆ ವಿಶ್ವ ಹಿಂದೂಪರಿಷದ್ ಬಜರಂಗದಳ.
ಹಿಂದೂ ಸಮಾಜಕ್ಕೆ ತೊಂದರೆಯಾದಾಗ ಸಂಘಟನೆಯ ಕಾರ್ಯಕರ್ತರು ಮಾತ್ರವಲ್ಲದೆ ಇಡೀ ಹಿಂದೂಗಳು ಎದ್ದು ನಿಲ್ಲಬೇಕಾಗಿದೆ. ದೇಶದ ಅಖಂಡತೆಯನ್ನು ಸಾರುವ ಇಂತಹ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಹಿಂದೂ ಬಾಂಧವರು ಭಾಗವಹಿಸಿದರೆ ಮಾತ್ರ ಅದು ಪರಿಣಾಮಕಾರಿಯಾಗಲು ಸಾಧ್ಯ. ಧರ್ಮ ಎಂದರೆ ತಂದೆ,ಭಾರತ ಎಂದರೆ ತಾಯಿ, ಇದೆರಡರ ರಕ್ಷಣೆ ಹಿಂದೂಗಳ ಹೊಣೆ ಎಂದು ಅವರು ಹೇಳಿದರು
ವೇದಿಕೆಯಲ್ಲಿ ಉಪೇಂದ್ರ ನಾಯಕ್ ಸುಳ್ಯ, ಹರಿಪ್ರಸಾದ್ ಎಲಿಮಲೆ, ರೂಪೇಶ್ ಪೂಜಾರಿಮನೆ, ರಾಜೇಶ್ ಕಲ್ಲುಮುಟ್ಲು ಉಪಸಿತರಿದ್ದರು.
ಕು. ಅಭಿಜ್ಞಾ ಭಟ್ ವಂದೇ ಮಾತರಂ ಗೀತೆ ಹಾಡಿದರು.
ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ, ರಾಜೇಶ್ ಕಲಮುಟ್ಟು ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.
ಜ್ಯೋತಿ ವೃತ್ತದಿಂದ ಹೊರಟ ಪಂಜಿನ ಮೆರವಣಿಗೆಗೆ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾನೀರಬಿದಿರೆ ಯವರು ಪಂಜಿಗೆ ಬೆಂಕಿ ಜ್ವಾಲೆಯನ್ನು ಹಚ್ಚುವ ಮೂಲಕ ಚಾಲನೆ ನೀಡಿದರು. ಕಲ್ಕುಡ
ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ರವರು ತೆಂಗಿನಕಾಯಿ ಒಡೆದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ
ಪ್ರದ್ಯುಮ್ನ ಉಬರಡ್ಕ,ಹರೀಶ್ ಕಂಚಿಪಿಲಿ, ಎ. ಟಿ.
ಕುಸುಮಾಧರ, ರಜತ್ ಅಡ್ಕಾರ್, ಜಿ.ಜಿ ನಾಯಕ್, ವರ್ಷಿತ್ ಚೊಕ್ಕಾಡಿ, ಗಿರೀಶ್ ಕಲ್ಲುಗದ್ದೆ, ಪ್ರಬೋದ್ ಶೆಟ್ಟಿ ಮೇನಾಲ, ಸುಧಾಕರ ಕೇರ್ಪಳ, ಶಿನಪ್ಪ ಬಯಂಬು ಮತ್ತಿತರರು ಭಾಗವಹಿಸಿದ್ದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ, ದುರ್ಗಾ ವಾಹಿನಿ,ಮಾತೃಶಕ್ತಿ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜ್ಯೋತಿ ವೃತ್ತದಿಂದ ಹೊರಟ ಮೆರವಣಿಗೆ ಗಾಂಧಿನಗರದ ತನಕ ಸಾಗಿ ಮತ್ತೆ ಹಿಂತಿರುಗಿ ರಥಬೀದಿಯಾಗಿಚೆನ್ನಕೇಶವ ದೇವಸ್ಥಾನದ ಬಳಿ ಸಮಾಪನಗೊಂಡಿತು.



