ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ!?
ಗ್ರಾಮಸ್ಥರಿಂದ ಸುಳ್ಯ ಬಿಎಸ್ ಎನ್ ಎಲ್ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಮರ್ಕಂಜ ಗ್ರಾಮದ ಬಿಎಸ್ ಎನ್ ಟವರ್ ಜೀವಂತ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆಯೂ ನಿಷ್ಕ್ರಿಯವಾಗಿದೆ ಎಂದು ತಿಳಿದು ಬಂದಿದೆ. ಸುಮಾರು ಒಂದು ತಿಂಗಳಿಂದ ಗ್ರಾಮದಲ್ಲಿ ಬಿ ಎಸ್ ಎನ್ ಎಲ್ ಸಿಮ್ ಕಾರ್ಡ್ ಹೊಂದಿರುವ ಬಳಕೆದಾರರು ಅನುಭವಿಸುತ್ತಿರುವ ಕಷ್ಟ ಹೇಳತೀರಾಗಿದೆ.















ಟವರ್ ನಿರ್ವಾಹಕರಿಗೆ ಕೇಳಿದರೆ ಕಾರ್ಡ್ ಡೆಡ್ ಆಗಿದೆ. ಇವತ್ತು ಸರಿ ಆಗುತ್ತೆ. ನಾಳೆ ಆಗುತ್ತೆ ಎಂಬ ಉತ್ತರ ಸಿಗುತ್ತಿದೆ ಅಷ್ಟೆ ಅಲ್ಲದೇ ಸಮಸ್ಯೆ ಪರಿಹಾರ ವಾಗಿಲ್ಲ. ಕೂಡಲೇ ದುರಸ್ತಿ ಪಡಿಸದೇ ಇದ್ದರೆ ಸುಳ್ಯ ಬಿ ಎಸ್ ಎನ್ ಎಲ್ ಕಛೇರಿಯ ಮುಂದೆ ಪ್ರತಿಭಟನೆ ಮಾಡುವ ನಿರ್ಧಾರಕ್ಕೆ ಮರ್ಕಂಜ ಗ್ರಾಮಸ್ಥರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಯಾವುದೇ ದೂರವಾಣಿ ಸಂಪರ್ಕವೂ ಸರಿಯಾಗಿ ಇಲ್ಲದೆ ತುಂಬಾ ಸಮಸ್ಯೆ ಉದ್ಭವಿಸಿದೆ. ಏರ್ಟೆಲ್ ಸಹ ಕರೇಂಟ್ ಹೋದರೆ ಕಾರ್ಯನಿರ್ವಹಿಸಲ್ಲ ಮತ್ತು ಮೊದಲಿನಂತೆ ಎಲ್ಲಾ ಕಡೆ ಸರಿಯಾಗಿ ದೂರವಾಣಿ ಸಂಪರ್ಕವೂ ಸಿಗುತ್ತಿಲ್ಲ.
ಹೀಗಾಗಿ ದೂರವಾಣಿ ಸಂಪರ್ಕ ಶೀಘ್ರವಾಗಿ ಸರಿಪಡಿಸಬೇಕಾಗಿದೆ.










