ಜಯನಗರ ಮಸ್ಜಿದ್ ಮತ್ತು ಮದ್ರಸಾ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸಾ ಸಮಿತಿ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆ.15 ರಂದು ಆಚರಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಹನೀಫ್ ಜಯನಗರ ಧ್ವಜಾರೋಹಣವನ್ನು ನೆರವೇರಿಸಿದರು. ಸಯ್ಯಿದ್ ಝೃನುಲ್ ಆಬಿದೀನ್ ತಂಙಳ್ ರವರು ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿ ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಶರೀಫ್ ಜಯನಗರ, ಉಪಾಧ್ಯಕ್ಷ ನವಾಜ್ ಪಂಡಿತ್,ಸದಸ್ಯರುಗಳಾದ ಮುನೀರ್, ಸಿನಾನ್, ಮಾಜಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಹಾಗೂ ಮದ್ರಸಾ ವಿದ್ಯಾರ್ಥಿಗಳು, ಪೋಷಕರುಗಳು ಭಾಗವಹಿಸಿದ್ದರು.
ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.