ಕಳೆದ ಒಂದು ವರ್ಷಗಳಿಂದ ಪೂಮಲೆ ರಕ್ಷಿತಾರಣ್ಯಕ್ಕೆ ಬಂದು ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿಯಾಗುತ್ತಿದ್ದಂತೆ ಅರಣ್ಯದಂಚಿನ ಕೃಷಿ ತೋಟಗಳಿಗೆ ದಾಳಿ ಮಾಡಿ ಅಪಾರ ಹಾನಿ ಮಾಡಿದೆ. ನಿನ್ನೆ ರಾತ್ರಿ ಕುದ್ಕುಳಿ, ಬಳ್ಳಾಕ್ಕನ ಪ್ರದೇಶಕ್ಕೆ ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿವೆ.
ನಿನ್ನೆ ರಾತ್ರಿಯ ವೇಳೆಗೆ ಅಜ್ಜಿಕಲ್ಲು ಕಟ್ಟಕ್ಕೋಡಿ ಭಾಗದಲ್ಲಿ ಇದ್ದ ಕಾಡನೆಗಳ ಹಿಂಡನ್ನು ಸ್ಥಳೀಯರು ಹಿಮ್ಮೆಟ್ಟಿಸಿದ್ದರು. ಆ ಬಳಿಕ ಅಲ್ಲಿಂದ ಹೋದ ಹಿಂಡು ಬಳ್ಳಾಕ್ಕನ ಸುಬ್ರಮಣ್ಯ ಭಟ್, ಗೋವಿಂದ ಭಟ್ ಬಳ್ಳಾಕನ, ಕುದ್ಕುಳಿ ವಿಶ್ವನಾಥ ಮಲೆ, ನರಸಿಂಹ ಕುದ್ಕುಳಿ ಯವರ ತೋಟಗಳಿಗೆ ದಾಳಿ ಮಾಡಿ 600ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶ ಮಾಡಿದೆ. ಅಲ್ಲದೇ ತೆಂಗಿನ ಗಿಡ, ಅಡಿಕೆ ಗಿಡ, ಕಾಳು ಮೆಣಸಿನ ಬಳ್ಳಿ, ಜೀಗುಜ್ಜೆ ಮರ ಹೀಗೆ ಅನೇಕ ಕೃಷಿ ಹಾನಿ ಮಾಡಿದೆ.















ಕಷ್ಟ ಪಟ್ಟು ಮಾಡಿರುವ ಕೃಷಿ ಬೆಳೆಗಳು ಕಾಡು ಪ್ರಾಣಿಗಳಿಂದ ಹಾಳಾಗುತ್ತಿರುವುದರಿಂದ ಕೃಷಿಕರು ನೊಂದು ಕೊಂಡಿದ್ದಾರೆ.
ಈ ಬಗ್ಗೆ ಕಾಡು ಪ್ರಾಣಿಗಳ ನಿರಂತರ ದಾಳಿಯಿಂದ ತತ್ತರಿಸುತ್ತಿರುವ ಕೃಷಿಕರಿಗೆ ಶಾಶ್ವತ ಪರಿಹಾರ ಬೇಕೆಂಬ ಆಗ್ರಹ ಕೇಳಿ ಬಂದಿದೆ.










