















ಚೆಂಬು ಗ್ರಾ.ಪಂ.ನಲ್ಲಿ ಸ್ವಾತಂತ್ರೋತ್ಸವ ಆಚರಣೆ ನಡೆಯಿತು. ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ತೀರ್ಥರಾಮ ಪೂಜಾರಿ ಗದ್ದೆ ಇವರು 79ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀಮತಿ ಶಾರದ ಸೂರ್ಯಕುಮಾರ ಹಾಗೂ ಸದಸ್ಯರುಗಳಾದ ಹೆಚ್.ಎ. ಆದಂ ಸಂಟ್ಯಾರ್, ಹೆಚ್.ರಮೇಶ್, ಶ್ರೀಮತಿ ಶಶಿಕಲಾ, ವಸಂತ ಎನ್.ಟಿ., ಪಂಚಾಯಿತಿ ಕಾರ್ಯದರ್ಶಿ ಲಸಿತ ಎ. ಎಸ್. , ಪಂಚಾಯತಿ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಶ್ರೀಮತಿ ಬಿ.ಸಿ. ರೇಖಾ ಬಾಲಂಬಿ, ಅಂಗನವಾಡಿ ಕಾರ್ಯಕರ್ತರು , ಪುಟಾಣಿಗಳು, ಹಾಗೂ,ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಹರ್ ಘರ್ ತಿರಂಗ ಅಭಿಯಾನ ಜಾಥಾ ವನ್ನು ನೆರವೇರಿಸಲಾಯಿತು.










