ಸಂಪಾಜೆ : ಮಸ್ಜಿದುಲ್ ಇಸ್ಲಾಹ್ 79 ನೇ ಸ್ವಾತಂತ್ರ್ಯ ದಿನಾಚರಣೆ

0

ತೌಹೀದ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ (ರಿ) ಸಂಪಾಜೆ ಮತ್ತು ಮದ್ರಸತುಲ್ ಇಸ್ಲಾಹ್ ಸಂಪಾಜೆ ಇದರ ವತಿಯಿಂದ 79ನೇಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಸ್ಜಿದ್ ಅಲ್ ಇಸ್ಲಾಹ್ ಸಲಫಿ ಜುಮ್ಮಾ ಮಸೀದಿ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ನಿವೃತ್ತ ಮುಖ್ಯ ಶಿಕ್ಷಕರು, ಮಸ್ಜಿದ್ ಅಲ್ ಇಸ್ಲಾಹ್ ಸಲಫಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಮಾಸ್ಟರ್ ಸಂಪಾಜೆ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಖತೀಬರಾದ ಮೌಲವಿ ಶಮೀರ್ ಮೆಹಬೂಬ್ ಕೊಡಗು ರವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮಸೀದಿ ಸದಸ್ಯರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.