ಮುಹಿಯದ್ದೀನ್ ಜುಮಾ ಮಸ್ಜಿದ್ ಐವರ್ನಾಡು ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷರಾದ ಶರೀಫ್ ನಿಡುಬೆಯವರು ಧ್ವಜಾರೋಹಣ ನೆರವೇರಿಸಿದರು. ಮದ್ರಸಾ ಮಕ್ಕಳು ರಾಷ್ಟ್ರಗೀತೆ ಹಾಡಿದರು. ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆದ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ಖತೀಬ್ ಉಸ್ತಾದ್ ಅಬ್ದುಲ್ ಖಾದರ್ ಫೈಝಿಯವರು ಪ್ರಾರ್ಥನೆ ನೆರವೇರಿಸಿದರು.















ಬಳಿಕ ಜಮಾಅತ್ ಸದಸ್ಯರಾದ ಅಬೂಸ್ವಾಲಿಹ್ ಕರುಂಬಿಲ ರವರು ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ವಿವರಿಸಿದರು. ಉಪಾಧ್ಯಕ್ಷರಾದ ಆದಂ ವಿ.ಕೆ,ಕೋಶಾಧಿಕಾರಿ ಅಬ್ದುಲ್ಲ ಪಳ್ಳಿಕೆರೆ, ಹಾಗೂ ಎಲ್ಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಜಮಾಅತ್ ಸದಸ್ಯರು ,ಮಕ್ಕಳು ಪಾಲ್ಗೊಂಡಿದ್ದರು.
ಕಾರ್ಯದರ್ಶಿಯವರಾದ ಅಬೂಬಕ್ಕರ್ ಪರ್ಲಿಕಜೆ ಯವರು ಧನ್ಯವಾದ ಸಮರ್ಪಿಸಿದರು.ಹನೀಫ್ ಶೇಣಿಯಯವರ ವತಿಯಿಂದ ಸಿಹಿ ತಿಂಡಿ ವಿತರಿಸುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.










