ಬಾಳುಗೋಡು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಬಸವನಗುಡಿ ತನಕ ಮೆರವಣಿಗೆ

ಸ.ಹಿ.ಪ್ರಾ ಶಾಲೆ ಬಾಳುಗೋಡು ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.

ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರಹಾಸ ಶಿವಾಲ ಧ್ವಜಾರೋಹಣವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖೋಪಾಧ್ಯಾಯರು ಶುಭಾ.ಕೆ , ವಿಶ್ವ ಯುವಕ ಮಂಡಲ ಅಧ್ಯಕ್ಷರಾದ ರಾಜೇಶ್ ಕಿರಿಭಾಗ, ಶಾಲಾ ಸಹಶಿಕ್ಷಕಿಯರಾದ ಸುದರ್ಶಿನಿ. ಕೆ, ಅಕ್ಷಿತಾ, ಚಂದನ. ಎಂ.ಪಿ, ಸ್ವಾತಿ, ಅಂಗನವಾಡಿ ಶಿಕ್ಷಕಿ ತೀರ್ಥಕುಮಾರಿ, ಊರಿನ ಹಿರಿಯರಾದ ಸುಂದರ ಮುಚ್ಚಾರ, ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಧ್ವಜಾರೋಹಣದ ನಂತರ ಶಾಲೆಯಿಂದ ಬನಸವನಗುಡಿ ಕೆ. ವಿ ವೃತ್ತದ ವರೆಗೆ ಮೆರವಣಿಗೆ ನಡೆಸಲಾಯಿತು. ,ಶಾಲೆಯಲ್ಲಿ ವಿವಿಧ ಕಾರ್ಯಕ್ರಮವನ್ನು ನಡೆಸಲಾಯಿತು.