














ಸುಬ್ರಹ್ಮಣ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಅಥವಾ ಶವಗಳನ್ನು ಸಾಗಿಸಲು ಅಗತ್ಯವಾದ ಸ್ಟ್ರಕ್ಚರ್ ಬಹಳ ಅವಶ್ಯಕತೆ ಇದ್ದು ಅದನ್ನು ಮನಗಂಡ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಎ. ತಿಲಕ್ ಅವರು ಹೊಸದಾಗಿ ಸ್ಟ್ರಕ್ಚರನ್ನು ಮಾಡಿಸಿ ಸುಬ್ರಮಣ್ಯ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ಸ್ವಾತಂತ್ರ್ಯೋತ್ಸವದ ದಿನದಂದು ಕೊಡುಗೆಯಾಗಿ ನೀಡಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಪಿಡಿಓ ಮಹೇಶ್ ಕಾರ್ಯದರ್ಶಿ ಮೋನಪ್ಪ ಹಾಗೂ ಸದಸ್ಯರುಗಳು ಸ್ಟ್ರಕ್ಚರನ್ನು ಸ್ವೀಕರಿಸಿದರು










