ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ಬಿ.ಎಂ.ಎಸ್) ಸಂಯೋಜಿತ ಸುಳ್ಯ ಇದರ ವತಿಯಿಂದ 78ನೇ ವರುಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು.
ಧ್ವಜಾರೋಹಣ ವನ್ನು ಹವಾಲ್ದಾರ್ ಮಾಜಿ ಸೈನಿಕರು ಭಾರತೀಯ ಸೇನೆ ಚಾರ್ಲ್ಸ್ ಹೆರಾಲ್ಡ್ ಡಿ.ಸೋಜಾ. ನೆರವೇರಿಸಿದರು. ಮುಖ್ಯ ಅಭ್ಯಾಗತರಾಗಿ ಈ ಸಂದರ್ಭದಲ್ಲಿ ಪಿ.ಗೋಪಾಲಕೃಷ್ಣ ಭಟ್, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ, ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ. ಎಸ್. ಮಾತಾಡಿದರು. ಸಿಂಧೂರ ವಿಜಯದ ಸವಿ ನೆನಪಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಅಭ್ಯಾಗತರನ್ನು ಚಾಲಕ ಸದಸ್ಯರನ್ನು ಸಿಂಧೂರ ತಿಲಕ ಹಣೆಗೆ ಹಚ್ಚಿ ಸ್ವಾಗತಿಸಲಾಯಿತು.

ಆಪರೇಷನ್ ಸಿಂಧೂರದಲ್ಲಿ ಪರಾಕ್ರಮ ಮೆರೆದು ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿಗೆ ಅನಾವರಣಗೊಳಿಸಿದ ಬ್ರಹ್ಮೋಸ್ ಕ್ಷಿಪಣಿ ಹಾಗೂ ಎಸ್ 400 ರಾಡಾರ್ ಸುದರ್ಶನ ಚಕ್ರ. ಕಟೌಟ್ ಗೆ. ಮಾತೇಯರಿಂದ ಹರಸಿನ ಕುಂಕುಮ ಹಚ್ಚಿ ಪುಷ್ಪ ನಮನ ಸಲ್ಲಿಸಲಾಯಿತು. ಯಶಸ್ವಿ ಪಿ. ಭಟ್ ವಂದೇ ಮಾತರಂ ಹಾಡಿದರು. ಝಂಡಾ ಊಂಚ ನಾಗರಾಜ್ ಮುಳ್ಯ ಹಾಡಿದರು.















ಬಳಿಕ ಎಲ್ಲಾ ಸದಸ್ಯರು ಆಟೋರಿಕ್ಷಾ ಸಹಿತ ತ್ರಿವರ್ಣ ಧ್ವಜದೊಂದಿಗೆ ಶ್ರೀ ಭಗತ್ ಸಿಂಗ್ ನಿಲ್ದಾಣ (ಖಾಸಗಿ ಬಸ್ ನಿಲ್ದಾಣ) ದಿಂದ ಮೆರವಣಿಗೆ ಹೊರಟು ಗಾಂಧಿನಗರ ಬಸ್ ನಿಲ್ದಾಣ, ಶ್ರೀರಾಮ್ ಪೇಟೆ, ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್, ಶ್ರೀ ಭಗತ್ ಸಿಂಗ್ ನಿಲ್ದಾಣದ ವರೆಗೆ ಮೆರವಣಿಗೆ ಸಾಗಿತು.
ಕೋಶಾಧಿಕಾರಿ ರವಿ ಎಸ್., ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಪ್ರಮುಖರಾದ ವಿಜಯ ಕುಮಾರ್ ಉಬರಡ್ಕ, ಚಂದ್ರ ಶೇಖರ ಮರ್ಕಂಜ, ನಿರ್ದೇಶಕರಾದ ದರ್ನೇಶ್, ಜಯರಾಮ ಪಿ., ಲೋಕೇಶ್, ಶಂಕರ, ಜನಾರ್ದನ ಕೆ., ಹಾಗೂ ಸದಸ್ಯರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಮಾತೆಯರಾದ ಪುನೀತ ಪ್ರಕಾಶ್, ಹರಿನಾಕ್ಷಿ ನಾರಾಯಣ, ಅನುರಾಧ ರವಿ ಬಂದವರಿಗೆ ಸಿಂಧೂರ ಹಾಗೂ ಪುಷ್ಪನಮನ ಸಲ್ಲಿಸಿದರು. ಸುರೇಂದ್ರ ಕಾಮತ್ ಸ್ವಾಗತಿಸಿ, ಪ್ರಶಾಂತ್ ಭಟ್ ವಂದಿಸಿದರು. ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್.ಎಂ ಕಾರ್ಯ ಕ್ರಮ ನಿರೂಪಿಸಿದರು.
ಭಾನುಪ್ರಕಾಶ್ ಅಭ್ಯಾಗತರ ಪರಿಚಯ ಮಾಡಿದರು.










