ಸೈಕಾಲಜಿಸ್ಟ್ ಹಾಗೂ ಥೆರಪಿಸ್ಟ್ ಶ್ರದ್ಧಾ ರೈ ಅವರಿಗೆ ಸ್ವಸ್ತಿ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಥೆರಪಿ ಅಂಡ್ ಹೋಲಿಸ್ಟಿಕ್ ಹೀಲಿಂಗ್ ವತಿಯಿಂದ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಥೆರಪ್ಯುಟಿಕ್ ಹೀಲಿಂಗ್ ಮತ್ತು ಹೋಲಿಸ್ಟಿಕ್ ವೆಲ್‌ನೆಸ್‌ನಲ್ಲಿ ನೀಡಿದ ಅಪರೂಪದ ಸೇವೆಗಾಗಿ ಗೌರವಾನ್ವಿತ “ಸತ್ವ ಶ್ರೀ” ಬಿರುದು ಪ್ರದಾನ ಮಾಡಲಾಗಿದೆ.















ಶ್ರದ್ಧಾ ರೈವರು ಕಡಬ ತಾಲೂಕಿನ ಕೆನ್ಯ ಗ್ರಾಮದ ಶಾರದಾ ಗಾರ್ಡನ್‌ನ ಅಲಂದೂರು ಸುದರ್ಶನ್ ಶೆಟ್ಟಿ ಮತ್ತು ಅಜ್ರಿ ಮಮತಾ ಸುದರ್ಶನ್ ಶೆಟ್ಟಿವರ ಹಿರಿಯ ಪುತ್ರಿ ಹಾಗೂ ಇನ್ಫೋಸಿಸ್ ಮಂಗಳೂರು ಬಿಪಿಒ ಮುಖ್ಯಸ್ಥರಾದ ಲಲಿತ್ ರೈಯವರ ಪತ್ನಿ. ಶ್ರದ್ಧಾ ರೈ ಪ್ರಸ್ತುತ ಕಡಬ, ಬೆಳ್ಳಾರೆ, ಪುತ್ತೂರು ಹಾಗೂ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದು, SAIUTP ನ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಪುತ್ತೂರಿನ ವಿವೇಕಾನಂದ ಸೈನ್ಸ್, ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜಿನ ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಭಾರತೀಯ ವಿಶ್ವ ಸಂಸ್ಕೃತಿ ಸಂಸ್ಥೆ, ಬಸವನಗುಡಿ, ಬೆಂಗಳೂರು ಇಲ್ಲಿ ನಡೆದಿದ್ದು, ಡಾ. ಆಶಾ (ಶೈಕ್ಷಣಿಕ ವಿಜ್ಞಾನಿ ಹಾಗೂ ಆಶಾ ದಿ ಹೋಪ್ ಸಂಸ್ಥಾಪಕಿ), ಪ್ರಭಾಕರನ್ (ಮಾಜಿ ಡಿಆರ್‌ಡಿಒ ವಿಜ್ಞಾನಿ), ಶ್ರೀ ಕೇಶವ ಪ್ರಸಾದ್ (ಮಾಜಿ ಸತ್ಯಸಾಯಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಹಾಗೂ ಟ್ರಸ್ಟಿ – ಸಂಪೂರ್ಣ ಸ್ವರಾಜ್ ಫೌಂಡೇಶನ್) ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯಿತು.










