ದೇಶದ ಅಭಿವೃದ್ಧಿಯೇ ನಮ್ಮ ದ್ಯೇಯ : ತಿರುಮಲೇಶ್ವರ ಎಸ್
ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೆವಿಜಿ ಐಟಿಐ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜು ಜಂಟಿಯಾಗಿ 79ನೇ ಸ್ವಾತಂತ್ರ್ಯೋತ್ಸವವನ್ನು ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕೆವಿಜಿ ಐ.ಪಿ.ಎಸ್‌ನ ಸಭಾಂಗಣದಲ್ಲಿ ಆಚರಿಸಲಾಯಿತು.
ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ನೈಬ್ ಸುಬೆದಾರ್ ತಿರುಮಲೇಶ್ವರ ಎಸ್ ಧ್ವಜಾರೋಹಣ ಮಾಡಿ ‘ ದೇಶದ ಅಭಿವೃದ್ಧಿಯೇ ನಮ್ಮ ಧ್ಯೇಯ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಬಲಿಷ್ಠ ಭಾರತವನ್ನಾಗಿಸಿ ಇಡೀ ಜಗತ್ತಿಗೆ ನಮ್ಮ ಶಕ್ತಿಯನ್ನು ಪ್ರದರ್ಶಿಸೋಣ ‘ ಎಂದು ಹೇಳಿದರು.















ಬಳಿಕ ಮಾತನಾಡಿದ ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ‘ಬಿ ‘ ವಿಭಾಗದ ನಿರ್ದೇಶಕಿ ಡಾ. ಅಭಿಜ್ಞ ಕೆ.ಆರ್ ‘ ದೇಶ ಕಟ್ಟಲು ಇಂದಿನ ವಿದ್ಯಾರ್ಥಿಗಳೇ ರೂವಾರಿಗಳು. ಆದುದರಿಂದ ವಿದ್ಯಾರ್ಥಿಗಳು ದೇಶವನ್ನು ಬಲಿಷ್ಠಗೊಳಿಸಲು ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.
ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಕೆ.ಎಸ್ ಸ್ವಾತಂತ್ರ್ಯ ಆಚರಣೆಯ ಮಹತ್ವದ ಕುರಿತು ತಿಳಿಸಿದರು. ಅತಿಥಿಗಳ ಪರಿಚಯವನ್ನು 10ನೇ ತರಗತಿಯ ಸಂಜನಾ ಎಮ್ ವಾಚಿಸಿದರು.

ಬಳಿಕ ಕೆವಿಜಿ ಐಪಿಎಸ್ ನ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಹತ್ತನೇ ತರಗತಿಯ ಸ್ಕಂದ ದಿಯಾ ಪಿ ಕಲ್ಲಾಜೆ ಸ್ವಾಗತಿಸಿ ಅಲಿಸ್ಬ ಸಾರ ಮತ್ತು ಏಳನೇ ತರಗತಿಯ ಸಮರ್ಥ ಡಿ ರಾಜ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಎರಡು, ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ಕೃಷ್ಣನ ಮಹತ್ವವನ್ನು ಸಾರುವ ನೃತ್ಯದ ಮೂಲಕ ಎಲ್ಲರನ್ನು ಮನರಂಜಿಸಿದರು. ಈ ದಿನದ ವಿಶೇಷತೆಯ ಕುರಿತು 5ನೇ ತರಗತಿಯ ಅಮೇಯ ಭಾರದ್ವಾಜ್ ತಿಳಿಸಿದರೆ, ಕೃಷ್ಣಾಷ್ಟಮಿಯ ಮಹತ್ವವನ್ನು ಐಶಾನಿ ತಿಳಿಸಿದಳು. ಈ ಕಾರ್ಯಕ್ರಮವನ್ನು ಅಥರ್ವ ನಿರೂಪಿಸಿ ಮೋಹಕ್ ಕೆ ವಂದಿಸಿದರು.ಕಾರ್ಯಕ್ರಮದಲ್ಲಿ ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ವಿಭಾಗದ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್, ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ. ಆರ್, ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ವಿಭಾಗದ ಆಡಳಿತಾಧಿಕಾರಿ ಭವಾನಿಶಂಕರ್ ಅಡ್ತಲೆ, ಪ್ರಸನ್ನ ಕಲ್ಲಾಜೆ, ಪೋಷಕ ವೃಂದ, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.










