ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಗೆ ಅಜ್ಜಾವರ ಗ್ರಾಮದ ಎಲ್ಲ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೆ , ಗ್ರಾಮ ಪಂಚಾಯತ್ ಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸಿಹಿ ವಿತರಿಸಲಾಗಿದೆ. ಒಟ್ಟು ಸುಮಾರು 1780 ರಷ್ಟು ಲಾಡು ವಿತರಣೆ ನಡೆದಿದೆ.















ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ಅಜ್ಜಾವರದ ಶ್ರೀಮತಿ ಲೀಲಾ ಮನಮೋಹನರಿಗೆ ಗ್ರಾಮ ಪಂಚಾಯತ್, ಶಾಲೆಯವರು, ಅಂಗನವಾಡಿಯವರು ದೇವಸ್ಥಾನದ ವತಿಯಿಂದ ಸಿಹಿ ವಿತರಿಸುವಂತೆ ಕೇಳಿಕೊಂಡರಲ್ಲದೆ, ದೇವಸ್ಥಾನದ ಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಅವರ ಕೋರಿಯಂತೆ ಎಲ್ಲ ಶಾಲೆಗಳಿಗೂ ಲಾಡು ವಿತರಿಸಲಾಗಿದೆ ಎಂದು ತಿಳಿದುಬಂದಿದೆ.










