
ವರಮಹಾಲಕ್ಷ್ಮೀ ಪೂಜಾ ಸಮಿತಿ ಮೇನಾಲ ಇದರ ವತಿಯಿಂದ ಮೇನಾಲ ಶ್ರೀಕೃಷ್ಣ ಭಜನಾ ಮಂದಿರದ ಸಹಕಾರದೊಂದಿಗೆ ವರಮಹಾಲಕ್ಷ್ಮೀ ಪೂಜೆಯು ಆ-೮ರಂದು ಮೇನಾಲ ಭಜನಾ ಮಂದಿರದಲ್ಲಿ ನಡೆಯಿತು.

ಪುರೋಹಿತ ಶಿವಪ್ರಸಾದ್ ಭಟ್ ಪೂಜಾ ಕೈಂಕರ್‍ಯಗಳನ್ನು ನೆರವೇರಿಸಿದರು. ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಬೇಬಿ ಸುಕುಮಾರ್ ಕಲ್ಲಗುಡ್ಡೆ ದಂಪತಿಗಳು ವ್ರತಧಾರಿಗಳಾಗಿ ಭಾಗವಹಿಸಿದ್ದರು. ನಂತರ ಬಂದ ಎಲ್ಲಾ ಭಕ್ತಾದಿಗಳಿಗೆ ಸಂಕಲ್ಪ ನೆರವೇರಿಸಲಾಯಿತು.















ನಂತರ ನಡೆದ ಸಭಾ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಬೇಬಿ ಸುಕುಮಾರ್ ಕಲ್ಲಗುಡ್ಡೆ ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಸ.ಹಿ.ಪ್ರಾ. ಶಾಲೆ ಹೊಕ್ಕಿಲ ಬೆಳ್ತಂಗಡಿ ಇಲ್ಲಿಯ ಶಿಕ್ಷಕಿ ಶ್ರೀಮತಿ ಮಮತಾ ಟೀಚರ್ ನೆರವೇರಿಸಿದರು.

ನಂತರ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಾದ ಕು.ಸಾಕ್ಷಿ ಪಳ್ಳತ್ತಡ್ಕ, ಹಿಮಾನಿ ಬೇಲ್ಯ, ಅನುಷ್ ಮೇನಾಲ, ರಚನಾ ಮೇನಾಲ, ನಿರೀಕ್ಷಾ ಸುಲಾಯ, ಸುಶಾಂತ್ ಪಳ್ಳತ್ತಡ್ಕ ಇವರುಗಳನ್ನು ಗೌರವಿಸಲಾಯಿತು ಮತ್ತು ವೈದ್ಯಕೀಯ ವಿಭಾಗದ ಸೇವೆ ನೀಡುತ್ತಿರುವ ಡಾ ಅವಿನಾಶ್ ಮತ್ತು ಭಜನಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಶೇಷಪ್ಪ ಪಳ್ಳತ್ತಡ್ಕ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಂತರ ಶ್ರೀ ದೇವಿಗೆ ಮಹಾಮಂಗಳಾರತಿ ನಡೆದು ಪ್ರಸಾದ ವಿತರಿಸಲಾಯಿತು. ಸಭಾ ಕಾರ್‍ಯಕ್ರಮದಲ್ಲಿ ಕು.ವೈಷ್ಣವಿ ಪ್ರಾರ್ಥಿಸಿದರು. ಕು ಆಪ್ತ ರೈ ಸ್ವಾಗತಿಸಿ, ಶ್ರೀಮತಿ ಶೋಭಾ ರಾಮಚಂದ್ರ ವಂದಿಸಿದರು. ಶ್ರೀಮತಿ ದೇವಕಿ ಟೀಚರ್ ಅತಿಥಿಗಳನ್ನು ಪರಿಚಯಿಸಿದರು. ಕು ಯಕ್ಷಿತಾ ಉದ್ದಂತಡ್ಕ ಕಾರ್‍ಯಕ್ರಮ ನಿರೂಪಿಸಿದರು.










