














ಮುರುಳ್ಯ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಧ್ವಜಾರೋಹಣ ಮಾಡಿದರು. ಪಂಚಾಯತ್ ಉಪಾಧ್ಯಕ್ಷೆ ಕು. ಜಾನಕಿ ಮುರುಳ್ಯ ಮತ್ತು ಸದಸ್ಯರು, ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ ಮತ್ತು ಸಿಬ್ಬಂದಿಗಳು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುರುಳ್ಯ ಶಾಂತಿನಗರ ಶಾಲಾ ವಿದ್ಯಾರ್ಥಿಗಳು ಧ್ವಜಗೀತೆ ಹಾಡಿದರು. ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ ಪ್ರತಿಜ್ಞಾವಿಧಿ ಬೋಧಿಸಿದರು.










