ಕರಿಂಬಿಲ ಸ.ಕಿ.ಪ್ರಾ. ಶಾಲೆಯಲ್ಲಿ ಬಹಳ ಸಂಭ್ರಮ ಸಡಗರದಿಂದ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ವಸಂತ ಕುಕ್ಕಯಕೋಡಿಯವರು ಧ್ವಜಾರೋಹಣಗೈದರು.
















ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಊರ ಗಣ್ಯರಾದ ಪದ್ಮನಾಭ ರೈ ಎಂಜೀರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾದ ನಿವೃತ್ತ ಮುಖ್ಯ ಗುರುಗಳಾದ ಬಾಲಕೃಷ್ಣ ಹೇಮಳ , ಪೂವಪ್ಪ ಗೌಡ ಕೋಳ್ಪೆ , ಜಯಂತ ಕೆ ಸಿಆರ್‌ಪಿ ಎಣ್ಮೂರು ಮತ್ತು ಪಂಜ ಕ್ಲಸ್ಟರ್, ಪರಮೇಶ್ವರ ಮನೋಳಿತಾಯ, ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಎಡಮಂಗಲ ಗ್ರಾ.ಪಂ. ಸದಸ್ಯೆ ಶ್ರೀಮತಿ ರೇವತಿ ಎಂಜೀರು, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವೆಂಕಪ್ಪ ರೈ ಪೊಯ್ಯೆತ್ತೂರು, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ನಳಿನಿ ಲೆಕ್ಕೆಸಿರಿಮಜಲು ಉಪಸ್ಥಿತರಿದ್ದು ದಿನದ ವಿಶೇಷತೆ ಕುರಿತು ಮಾತಾನಾಡಿ, ಶುಭಹಾರೈಸಿದರು.

ಬಿ ಸ್ಮಾರ್ಟ್ ಎಂಟರ್‌ಪ್ರೈಸಸ್ ನಿಂತಿಕಲ್ ಹಾಗೂ ಪೊಲೋ ಪ್ಲಸ್ ನಿಂತಿಕಲ್ ಇದರ ಮಾಲಿಕರಾದ ದೇವಿಪ್ರಸಾದ್ ಕೇರ್ಪಡ ಹಾಗೂ ಧ್ರುವಕುಮಾರ್ ಕೇರ್ಪಡರವರು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿಗಳು ,ಎಸ್‌ಡಿಎಂಸಿ ಸರ್ವ ಸದಸ್ಯರು , ಪೋಷಕ ವೃಂದವರು ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.
(ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ)










