ಕುಂಭಕೋಡು ಎಂಬಲ್ಲಿ ರಸ್ತೆಯಲ್ಲಿ ನೀರು ನಿಂತು ಪಳ್ಳ ನಿರ್ಮಾಣ

0

ಸಮರ್ಪಕ ಚರಂಡಿ ನಿರ್ಮಿಸಿ- ರಸ್ತೆಯನ್ನು ಉಳಿಸಿ ಸಾರ್ವಜನಿಕರ ಅಗ್ರಹ

ನಾರ್ಕೋಡು -ಕೊಲ್ಚಾರ್ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಲ್ಲಿ ಕುಂಭಕೋಡು ಎಂಬಲ್ಲಿ ರಸ್ತೆಯ ಮೇಲೆ ನೀರು ನಿಂತು ದಿನವೂ ಕಿರಿ ಕಿರಿಯಾ ಗುತ್ತಿದೆ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ರಸ್ತೆ ಮೇಲಿನ ಭಾಗದಲ್ಲಿ ನೀರು ನಿಂತು ಪಲ್ಲದಂತಾಗಿದೆ. ರಸ್ತೆಯ ಮೇಲಿನ ಭಾಗದಿಂದ ಮಳೆ ನೀರು ಹರಿದು ರಸ್ತೆಗೆ ಬಂದು ಚರಂಡಿ ಮೂಲಕ ಹರಿಯದಿರುವುದರಿಂದ
ಈ ರೀತಿಯ ಸಮಸ್ಯೆ ಉಂಟಾಗಿದೆ.

ಇದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿ ವಾಹನ ಸವಾರರು ತೊಂದರೆ ಅನುಭವಿಸಬೇಕಾಗುವುದು.