ಸ್ಪೂರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ( ರಿ. ) ನೆಲ್ಲೂರು ಕೆಮ್ರಾಜೆ ಇದರ ೨೦೨೪ – ೨೦೨೫ ಸಾಲಿನ ಮಹಾಸಭೆಯು ಆ.೧೪ ರಂದು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯಕುಮಾರ್ ಕೋಟೆಮಲೆ ಯವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾದಿ ವಿನಯ ಮುಳುಗಾಡುರವರು ಲಿಂಗತ್ವ ಸಮಾನತೆ, ಮಹಿಳಾ ದೌರ್ಜನ್ಯ ವಿರೋಧಿ ಕಾನೂನು ಮತ್ತು ಮಾದಕ ವ್ಯಸನಮುಕ್ತ ಸಮಾಜದ ಕುರಿತು ಮಾಹಿತಿ ನೀಡಿದರು.
ಸುಳ್ಯ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣರವರು ಸಂಜೀವಿನಿ ಸಂಘಗಳ ರಚನೆ, ಒಕ್ಕೂಟ, ಲೆಕ್ಕ ಪರಿಶೋಧನೆ ಹಾಗೂ ಮಹಿಳೆಯರ ಸ್ವ ಉದ್ಯೋಗ ಕುರಿತು ಮಾಹಿತಿ ನೀಡಿದರು.















ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶೀಮತಿ ಶ್ವೇತಾ ಪ್ರಾಸ್ತಾವಿಕವಾಗಿ ಮಾತನಾಡಿದರು . ಬಿಪಿಆರ್ ಪಿ.ಆರ್. ಐ. ಶ್ರೀಮತಿ ಜಯಲಕ್ಷ್ಮಿಯವರು ವಿ.ಪಿ.ಆರ್.ಪಿ. ಸರ್ವೆಯ ಬಗ್ಗೆ ಮಾಹಿತಿ ನೀಡಿದರು. ಎಲ್.ಸಿ.ಆರ್.ಪಿ. ಶ್ರೀಮತಿ ಮಮತಾ ರವರು ಒಕ್ಕೂಟದ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.
ಕೃಷಿ ಸಖಿ ಶ್ರೀಮತಿ ಗೀತಾ ಹಾಜರಾತಿ ನಿರ್ವಹಿಸಿದರು. ಒಕ್ಕೂಟದ ನಿರ್ಗಮನಾಧ್ಯಕ್ಷೆ ಶ್ರೀಮತಿ ಮಮತಾ ಅವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಕಾವ್ಯ ಸನ್ಮಾನ ಪತ್ರ ವಾಚಿಸಿದರು.

ವಲಯ ಮೇಲ್ವಿಚಾರಕಿ ಶ್ರೀಮತಿ ರೂಪಾ ರವರು ಮುಂದಿನ ಸಾಲಿಗೆ ನೂತನ ಸಮಿತಿಯ ರಚನೆ ನಿರ್ವಹಿಸಿದರು.
ನೂತನ ಅಧ್ಯಕ್ಷರಾಗಿ ಶ್ರೀಮತಿ ಚಂದ್ರಾವತಿ ಗುಡ್ಡನಮನೆ, ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ, ಉಪಾಧ್ಯಕ್ಷರಾಗಿ ಶ್ರೀಮತಿ ದಮಯಂತಿ ದೊಡ್ಡಡ್ಕ, ಕೋಶಾಧಿಕಾರಿಯಾಗಿ ಶ್ರೀಮತಿ ಪ್ರೇಮಾ ಮುಂಡೋಕಜೆ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರತಿಭಾ ದುರ್ಗಾಕುಮಾರ್ ಆಯ್ಕೆಗೊಂಡರು.
ಎಫ್.ಎಲ್.ಸಿ.ಆರ್.ಪಿ. ಭವ್ಯ ಓಂ ಪ್ರಸಾದ್ ಕಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪ್ರತಿಭಾ ದುರ್ಗಾಕುಮಾರ್ ವಂದಿಸಿದರು. ಎಂ.ಬಿ.ಕೆ. ಶ್ರೀಮತಿ ಪವಿತ್ರ ಸುಳ್ಳಿ, ಎಲ್.ಸಿ.ಆರ್.ಪಿ. ಶ್ರೀಮತಿ ಸುಚಿತ್ರ ಸಹಕರಿಸಿದರು.
ಗ್ರಾಮ ಪಂಚಾಯ್ ಸದಸ್ಯರು, ಸಿಬ್ಬಂದಿಗಳು, ಸಂಜೀವಿನಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










