ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ

0


ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ೭೯ನೇ ಸ್ವಾತಂತ್ರ್ಯೋತ್ಸವವನ್ನು ಆ. ೧೫ರಂದು ಆಚರಿಸಲಾಯಿತು.


ಧ್ವಜಾರೋಹಣವನ್ನು ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ಮೇದಪ್ಪ ಗೌಡ ಅಲೆಂಗಾರ ನೆರವೇರಿಸಿದರು. ಉಪಾಧ್ಯಕ್ಷರಾದ ಅಶೋಕ್ ಮೇಲ್ಪಾಡಿ, ಸದಸ್ಯರಾದ ನಾಗಪ್ಪ ಗೌಡ, ಶರ್ಮಕುಮಾರ್, ರಾಜೇಶ್ ಅಂಚನ್, ತಾಯಂದಿರ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಯನಾ ರೈ, ಸದಸ್ಯರಾದ ಶ್ರೀಮತಿ ಶಾಲಿನಿ ಕುಕ್ಕಾಯಕೋಡಿ, ಶಾಲಾ ಮಹಾದ್ವಾರ ಸಮಿತಿ ಅಧ್ಯಕ್ಷರಾದ ವೆಂಕಪ್ಪ ಗೌಡ ಆಲಾಜೆ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಚಿನ್ ಪಟ್ಟೆ ಅಡುಗೆ ಸಿಬ್ಬಂದಿಯವರು, ಶಾಲಾ ಪೋಷಕ ವೃಂದ, ಶಿಕ್ಷಕ ವೃಂದ, ಶಾಲಾ ವಿದ್ಯಾರ್ಥಿಗಳು ಸ್ಕೌಟ್ ಗೈಡ್ , ಸೇವಾದಳ, ಊರಿನ ಗಣ್ಯರು ಭಾಗವಹಿಸಿದ್ದರು.


ಕನ್ನಡ ಶಿಕ್ಷಕಿ ಶ್ರೀಮತಿ ಉಷಾ ಪೇರಾಲ್ ಸ್ವಾತಂತ್ರ್ಯೋತ್ಸವದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಖ್ಯ ಶಿಕ್ಷಕರಾದ ಟೈಟಸ್ ವರ್ಗೀಸ್ ಸ್ವಾಗತಿಸಿದರು ,ಚಿತ್ರಕಲಾ ಶಿಕ್ಷಕರಾದ ಮೋಹನ ಎ. ಯವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. (ಎ ಎಸ್ ಎಸ್)