ಸಮಾರೋಪ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ
ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ
ದುಗ್ಗಲಡ್ಕ ಕೊಯಿಕುಳಿಯ ಶ್ರೀ ಕೃಷ್ಣ ಮಂದಿರ, ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ಧಾರ್ಮಿಕ,ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೊಯಿಕುಳಿ ಶ್ರೀಕೃಷ್ಣ ಮಂದಿರದ ವಠಾರದಲ್ಲಿ ಆ.15 ರಂದು ನಡೆಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಗೌಡ ಮೋಂಟಡ್ಕ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ನಾಮ ನಿರ್ದೇಶನ ಸದಸ್ಯ ಭಾಸ್ಕರ ಪೂಜಾರಿ ಬಾಜಿನಡ್ಕ, ಇನ್ನರ್ ವೀಲ್ ಕ್ಲಬ್ ಪೂರ್ವಾಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ವಹಿಸಿದ್ದರು. ವೇದಿಕೆಯಲ್ಲಿ ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಅಧ್ಯಕ್ಷ ರಮೇಶ್ ನೀರಬಿದಿರೆ ಉಪಸ್ಥಿತರಿದ್ದರು.















ಕಾರ್ಯಕ್ರಮದಲ್ಲಿ ಕುರಲ್ ತುಳುಕೂಟದ ಕಾರ್ಯದರ್ಶಿ ಭಾಗೀಶ್ ಕೆ.ಟಿ. ಸ್ವಾಗತಿಸಿ, ಕೃಷ್ಣ ಮಂದಿರದ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ವಂದಿಸಿದರು. ಯುವಕ ಮಂಡಲದ ಪೂರ್ವಾಧ್ಯಕ್ಷ ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕೃಷ್ಣ ಮಂದಿರದಲ್ಲಿ ಬೆಳಿಗ್ಗೆ ಗಣಪತಿ ಹವನ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ನೆರವೇರಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಳ್ಯದ ಸ್ವರಸಿಂಚನ ಸುಗಮ ಸಂಗೀತ ಬಳಗ ಇವರಿಂದ ಭಕ್ತಿ ಭಾವ ಜನಪದ ಗೀತೆಗಳ ಗಾಯನ ನಡೆಯಿತು. ದುಗ್ಗಲಡ್ಕ ಅಂಗನವಾಡಿ ಪುಟಾಣಿಗಳಿಂದ ಹಾಗೂ ವಿದ್ಯಾರ್ಥಿಗಳಿಂದ ನೃತ್ಯ ನಡೆಯಿತು.
ಪುಟಾಣಿಗಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ದೈ.ಶಿ.ಶಿಕ್ಷಕ ರಘುನಾಥ ಶೆಟ್ಟಿ ಯು.ರವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕುರಲ್ ತುಳುಕೂಟದ ಅಧ್ಯಕ್ಷ ರಮೇಶ್ ನೀರಬಿದಿರೆ ವಹಿಸಿದ್ದರು. ಉಬರಡ್ಕ ಗ್ರಾ.ಪಂ.ಸದಸ್ಯ ಹರೀಶ್ ಉಬರಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಗೌಡ ಮೋಂಟಡ್ಕ, ಕೊಯಿಕುಳಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ತಾರಾನಾಥ ನೀರಬಿದಿರೆ, ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ,ನ.ಪಂ.ನಾಮ ನಿರ್ದೇಶಿತ ಸದಸ್ಯ ಭಾಸ್ಕರ ಪೂಜಾರಿ ಬಾಜಿನಡ್ಕ, ಮಿತ್ರ ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಉಪಸ್ಥಿತರಿದ್ದರು.

ಮಂದಿರದ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ, ತೀರ್ಥರಾಮ ಕೊಯಿಕುಳಿ ವಂದಿಸಿದರು. ಕುರಲ್ ತುಳುಕೂಟದ ಗೌರವಾಧ್ಯಕ್ಷೆ ನವ್ಯ ದಿನೇಶ್ ಕೊಯಿಕುಳಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಮಂದಿರದಲ್ಲಿ ಬಾಲಕೃಷ್ಣ ನಾಯರ್ ನೀರಬಿದಿರೆ ನೇತೃತ್ವದಲ್ಲಿ ನಡೆಯಲಿರುವ ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನೆ ನಡೆಯಿತು. ಚಂದ್ರಶೇಖರ ಗೌಡ ಮೋಂಟಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.










