ಬಾಳಿಲದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ.

0

ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಹಾಗು ಬಾಲವಿಕಾಸ ಅಂಗನವಾಡಿ ಕೇಂದ್ರ ಬಾಳಿಲ ಇವುಗಳ ಸಹಯೋಗದಲ್ಲಿ 13 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ನಡೆಯಿತು.

ಬಾಳಿಲ ಗ್ರಾಮಪಂಚಾಯತ್ ನ ಅಧ್ಯಕ್ಷರಾದ ಪಾವನ ಜೋಗುಬೆಟ್ಟು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀಕೃಷ್ಣ ಸೇವಾ ಸಮಿತಿಯ ಅಧ್ಯಕ್ಷರಾದ ಪುಷ್ಪಾ ಗಣೇಶ್ ,ಶ್ರೀ ದೇವತಾರಾಧನ ಸಮಿತಿ ಬಾಳಿಲ ಮುಪ್ಪೇರ್ಯ ಇದರ ನಿಕಟಪೂರ್ವ ಅಧ್ಯಕ್ಷರಾದ ಶೇಸಪ್ಪ ಪರವ ,ಬಾಳಿಲ ಅಂಗನವಾಡಿ ಕಾರ್ಯಕರ್ತೆ ದಯಾನಂದಿನಿ
ಉಪಸ್ಥಿತರಿದ್ದರು.
ಹರಿಣಾಕ್ಷಿ ಬರೆಮೇಲು ಸ್ವಾಗತಿಸಿ ಪ್ರೇಮಲತಾ ಮರುವಂಜ ಧನ್ಯವಾದ ಸಮರ್ಪಿಸಿದರು.

ಅಂಗನವಾಡಿ ಪುಟಾಣಿಗಳಿಂದ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯುತು.
ಜನ್ಮಾಷ್ಠಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ
ಬಾಳಿಲಗ್ರಾಮ ಪಂಚಾಯತ್ ಬಾಳಿಲದ ಸದಸ್ಯರಾದ ತ್ರಿವೇಣಿ ವಿಶ್ವೇಶ್ವರ ಬಾಳಿಲ ಸಮಾರೋಪ ಮಾತುಗಳನ್ನಾಡಿದರು. ಸಮಿತಿಯ ಅಧ್ಯಕ್ಷರಾದ ಪುಷ್ಪಾಗಣೇಶ್ ,ದಯಾನಂದಿನಿ ಉಪಸ್ಥಿತರಿದ್ದರು.


ಮುದ್ದು ಕೃಷ್ಣರಿಗೆ ಬಹುಮಾನ ವಿತರಿಸಲಾಯಿತು.
ಸರಿತಾ ಕಂಡಿಕಟ್ಟ ಧನ್ಯವಾದ ಸಮರ್ಪಿಸಿದರು.
ಜಾಹ್ನವಿ ಕಾಂಚೋಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.