ಬದ್ರಿಯಾ ಮಸೀದಿ, ನೂರುಲ್ ಇಸ್ಲಾಂ ಮದರಸ ನೆಟ್ಟಾರು, ಅಲ್ ಅಮಾನ್ ಕಮಿಟಿ, ಎಸ್.ಕೆ.ಎಸ್.ಎಸ್.ಎಫ್ ನೆಟ್ಟಾರು ಇದರ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ನೂರುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ಆಚರಿಸಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ಖಾದರ್ ಬಾಯಂಬಾಡಿ ಧ್ವಜಾರೋಹಣ ನೆರವೇರಿಸಿದರು.















ನಸಿಹ್ ದಾರಿಮಿ ಖಾತಿಬರು ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಹೋರಾಟ ಮಾಡಿದ ಹುತಾತ್ಮರ ನಾಯಕರನ್ನು ಸ್ಮರಿಸಿದರು.

ಮುಹಮ್ಮದ್ ನವಮಿ ಮುಂಡೊಲೆ ಸದರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ರಫೀಕ್ ಹನೀಫಿ ಸದರ್ ಉಸ್ತಾದ್ ನೆಟ್ಟಾರು ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್.ಕೆ.ಎಸ್.ಎಸ್ ನೆಟ್ಟಾರು ಅಧ್ಯಕ್ಷ ಶರೀಫ್ ಅಭಿನಂದಿಸಿದರು ಕಾರ್ಯಕ್ರಮದಲ್ಲಿ ಬೆಳ್ಳಾರೆ ಜಮಾತ್ ಅಧ್ಯಕ್ಷ ಯು.ಎಚ್ ಅಬೂಬಕ್ಕರ್ ಮಂಗಳ, ಪೆರುವಾಜೆ ಮದರಸದ ಅಧ್ಯಕ್ಷ ಜಮಾಲ್ ಕೆ. ಎಸ್, ಅಲ್ ಅಮಾನ್ ಕಮಿಟಿ ಅಧ್ಯಕ್ಷ ಸೈಫುದ್ದಿನ್ ನೆಟ್ಟಾರು, ಮದರಸದ ಉಪಾಧ್ಯಕ್ಷ ಹಸೈನಾರ್ ನೆಟ್ಟಾರು ಮತ್ತು ಅಲ್ ಅಮಾನ್ ಕಮಿಟಿ ಸದಸ್ಯರು, ಮದ್ರಸ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.










