ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬೆಳಿಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಶಾಂತ್ ಪಾಡಾಜೆ ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ, ಜಾಥಾ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಪೋಷಕರು ಹಾಗೂ ಊರಿನ ಅನೇಕ ಮಂದಿ ಭಾಗವಹಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಶಾಂತ್ ಪಾಡಾಜೆ ವಹಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಗಾಯತ್ರಿ ಯು , ನಿವೃತ್ತ ಮುಖ್ಯೋಪಾಧ್ಯಾಯರಾದ ಲೋಕನಾಥ, ಎಸ್.ಡಿ.ಎಂ.ಸಿ. ನಾಮ ನಿರ್ದೇಶಕರಾದ *ಮಾಧವ್ ಟಿ.ಪಿ., ತೋಟಗಾರಿಕೆ ಸಮಿತಿ ಉಪಾಧ್ಯಕ್ಷರಾದ ಜಗದೀಶ ಸಿ, ಅಂಗನವಾಡಿ ಕಾರ್ಯಕರ್ತೆ ಧರ್ಮಾವತಿ, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಶ್ರೇಯಸ್ವಿ ಶೇಣಿ, ಶಾಲೆಯ ಮುಖ್ಯೋಪಾಧ್ಯಾಯರಾದ ವಿನಯ ಪ್ರಸಾದ್ ಟಿ ಉಪಸ್ಥಿತರಿದ್ದರು.
















ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ ಕಾರ್ಯಕ್ರಮಗಳು ನಡೆಯಿತು. ಮುಖ್ಯ ಅತಿಥಿ ನೆಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಲೋಕನಾಥ ದೇಶಭಕ್ತಿ ಗೀತೆ ಹಾಡಿದರು. ಮುಖ್ಯೋಪಾಧ್ಯಾಯರು ಬ್ರಿಟಿಷರ ಆಗಮನದ ಹಿನ್ನೆಲೆ, ಅದರ ಕಾರಣಗಳು ಹಾಗೂ ದೇಶದ ಒಗ್ಗಟ್ಟಿನ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಹಾಜರಿದ್ದ ಗಣ್ಯರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಶಾಲೆಯ ಶಿಕ್ಷಕರು, ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟಾಣಿಗಳು ಪಾಲ್ಗೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸೃಜನ್ ಶೇಣಿ ಹಾಗೂ ಮಾಧವ್ ಟಿ.ಪಿ., ಆನಂದ ಪೂಜಾರಿ ಶಾಲಾ ಎಸ್.ಡಿ.ಎಂ.ಸಿ. ಸದಸ್ಯರ ಪ್ರಾಯೋಜಕತ್ವದಲ್ಲಿ ಸಿಹಿ ತಿಂಡಿ ವಿತರಣೆ, ತಿಂಡಿ ಚಹಾ ವಿತರಿಸಲಾಯಿತು.










