ಅಂತರ್ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಆರ್ಯನ್ ಕೆ.ಎಸ್ ದ್ವಿತೀಯ ಸ್ಥಾನ

0

ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ 2025 ರ ಸ್ಪರ್ಧೆಯಲ್ಲಿ ಬಾಲಕರ ಯಲ್ಲೋ ಬೆಲ್ಟ್ ಕಟಾ ವಿಭಾಗದ ಕರಾಟೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು
ಆರ್ಯನ್ ಕೆ. ಎಸ್ ಪಡೆದುಕೊಂಡಿರುತ್ತಾನೆ.

ಭಾರತೀಯ ಮೋಯೇಲ್ ಶೋಟೊಕಾನ್ ಕರಾಟೆ ಡೊ ಅಸೊಸಿಯೇಷನ್ ಮತ್ತು ಶಿವಮೊಗ್ಗ ಸಿಟಿ ಕರಾಟೆ ಅಸೊಸಿಯೇಷನ್ ವತಿಯಿಂದ ಆ. 9 ಮತ್ತು 10 ರಂದು ಆಯೋಜಿಸಲಾಗಿತ್ತು.

ಈತ ಸುಳ್ಯದ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಶಾಲೆಯ
5 ನೇ ತರಗತಿ ವಿದ್ಯಾರ್ಥಿ. ಪರಿವಾರಕಾನದ ಸುನಿಲ್ ಕುಮಾರ್ ಕೆ. ಸಿ. ಮತ್ತು
ಪ್ರತಿಮಾ ದಂಪತಿಯ ಪುತ್ರ.